ಬಂಟ್ವಾಳ: ಗ್ರಾಮ ಪಂಚಾಯತ್ ಅಧ್ಯಕ್ಷ ಅವರ ಕೊಲೆಗೆ ಸ್ವಂತ ಅಣ್ಣನಿಂದಲೇ ಸ್ಕೆಚ್ !
ಬಂಟ್ವಾಳ ತಾಲೂಕಿನ ಇರಾ ಗ್ರಾ.ಪಂ.ಅಧ್ಯಕ್ಷ ರಝಾಕ್ ಕುಕ್ಕಾಜೆ ಅವರ ಕೊಲೆ ಯತ್ನಕ್ಕೆ ರಝಾಕ್ ಅವರ ಸ್ವಂತ ಅಣ್ಣಾ ಹಾಗೂ ಇನ್ನೊರ್ವ ರಕ್ತ ಸಂಬಂಧಿ ಇಬ್ಬರು ಸೇರಿ ಸ್ಕೆಚ್ ಹಾಕಿದ್ದರು ಎಂಬ ಮಾಹಿತಿ ಲಭ್ಯವಾಗಿ ಅವರಿಬ್ಬರನ್ನು ಬಂಟ್ವಾಳ ವೃತ್ತ ನಿರೀಕ್ಷಕ ಟಿ. ಡಿ.ನಾಗರಾಜ್ ನೇತ್ರತ್ವ ಎಸ್.ಐ.ಪ್ರಸನ್ನ ಅವರ ತಂಡ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ.
ಕುಂಜುಮೋನು ಹಾಗೂ ಮಸೀದಿ ಮಾಜಿ ಆದ್ಯಕ್ಷ ತೋಟ ಅಬುಬಕ್ಕರ್ ಬಂಧಿತ ಆರೋಪಿಗಳು.

ಇರಾ ಗ್ರಾಮ ಪಂಚಾಯತ್ ಅಧ್ಯಕ್ಷ ರಝಾಕ್ ಕುಕ್ಕಾಜೆ ಅವರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಾದ ಮಂಚಿ ನಿವಾಸಿಗಳಾದ ಬಶಿರ್, ಕಬೀರ್ , ತನ್ವಿರ್ ಅವರನ್ನು ಪೋಲೀಸರು
ಬಂಧಿಸಿ, ಕಳೆದ ಎರಡು ದಿನಗಳ ಹಿಂದೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಅದರೆ ಅವರ ಬಂಧಿಸಿ ವಿಚಾರಣೆಯ ವೇಳೆ ಮಹತ್ವದ ವಿಚಾರವೊಂದನ್ನು ಬಾಯಿಬಿಟ್ಟಿದ್ದ ಕಾರಣ ಮತ್ತಿಬ್ಬರು ಆರೋಪಿಗಳನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ರಝಾಕ್ ಕುಕ್ಕಾಜೆ ಅವರ ಸ್ವಂತ ಅಣ್ಣಾ ಕುಂಜುಮೋನು ಹಾಗೂ  ರಝಾಕ್ ಅವರ ಸಂಬಂಧಿ ಮಸೀದಿ ಮಾಜಿ ಆದ್ಯಕ್ಷ ತೋಟ ಅಬುಬಕರ್ ಅವರನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಘಟನೆಯ ವಿವರ:
ನ. 30ರಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಮಂಚಿ ಕಟ್ಟೆಯ ಬಳಿ ಇರಾ ಗ್ರಾಮ ಪಂಚಾಯತಿ ಅಧ್ಯಕ್ಷ ರಜಾಕ್ ರವರ ಮೇಲೆ 3 ಜನ ಹಲ್ಲೆ ನಡೆಸಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ಅ.ಕ್ರ 123/19 ಕಲಂ 307,324,109 r/w 149 IPC ರಂತೆ ಪ್ರಕರಣ ದಾಖಲಾಗಿತ್ತು.
ಆದರೆ ಪ್ರಕರಣ ನಡೆದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಗಳ ಪತ್ತೆಗೆ ಗ್ರಾಮಾಂತರ ಠಾಣಾ ಪೋಲಿಸರು ಬಲೆಬೀಸಿದ್ದರು.
ಪ್ರಕರಣ ನಡೆದು 11 ದಿನಗಳ ಬಳಿಕ ಪೋಲೀಸರು ಮೂವರು ಆರೋಪಿ ಗಳಾದ ಕುಕ್ಕಾಜೆ ಗ್ರಾಮದ ಬಶಿರ್ (27) ಕಬೀರ್ (23 ) ತನ್ವಿರ್ (23) ಇವರನ್ನು ಡಿ. 11 ರಂದು ಬಂಧಿಸಿದ್ದು,
ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.
ಆದರೆ ವಿಚಾರಣೆಯ ವೇಳೆ ಬಂಧಿತ ಆರೋಪಿಗಳ ಮಾಹಿತಿಯಂತೆ ಮತ್ತಿಬ್ಬರು ಪ್ರಮುಖ ಸೂತ್ರದಾರಿ ಆರೋಪಿಗಳ ಬಗ್ಗೆ ಸುಳಿವು ಸಿಕ್ಕಿದ್ದು ಅವರನ್ನು ಬಂಧಿಸಿದ್ದಾರೆ.

ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ಅವರ ಮಾರ್ಗದರ್ಶನ ದಲ್ಲಿ ಗ್ರಾಮಾಂತರ ಪೋಲೀಸ್ ಠಾಣಾ ಎಸ್. ಐ.ಪ್ರಸನ್ನ ನೇತ್ರತ್ವದಲ್ಲಿ ಸಿಬ್ಬಂದಿಗಳಾದ ಜನಾರ್ದನ, ನಜೀರ್, ಶೇಖರ್ ಚಾವಗಲ್ ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿ ದ್ದಾರೆ.‌

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here