ವಿಟ್ಲ: ಬೊಳ್ನಾಡು ಶ್ರೀ ಭಗವತೀ ಕ್ಷೇತ್ರದ ಪುನರ್ ನಿರ್ಮಾಣ ಕಾರ್ಯದ 80 ಶೇ. ಕೆಲಸ ಪೂರ್ಣಗೊಂಡಿದ್ದು ಊರ ಪರವೂರ ಭಕ್ತಾದಿಗಳಿಂದ ಶ್ರಮಸೇವೆ ನಡೆಯುತ್ತಿದೆ. ಇತ್ತೀಚೆಗೆ ಶ್ರೀ ಭಗವತೀ ಆಲಿಚಾಮುಂಡಿ ಕ್ಷೇತ್ರ ಪಾರಸ್ತಾನ ಕುಂಬಳೆ ಇದರ ತೀಯಾ ಸಮಾಜ ಬಾಂಧವರ ಶ್ರಮಸೇವೆ ನಡೆಯಿತು.
ಈ ಸಂದರ್ಭದಲ್ಲಿ ಪಾರ ಶ್ರೀ ಭಗವತೀ ಆಲಿಚಾಮುಂಡಿ ಕ್ಷೇತ್ರದ ಅಧ್ಶಕ್ಷ ಸುಕುಮಾರ, ಯುವಜನ ಸಂಘದ ಅಧ್ಶಕ್ಷ ಸಜೀತ್ (ಮಣಿ) ಕಾರ್ಯದರ್ಶಿ ಪ್ರಕಾಶ್ ಸುವರ್ಣ ಮಹಿಳಾ ಸಂಘದ ಅಧ್ಶಕ್ಷೆ ಸೌಮ್ಯ ಅರಿಕ್ಕಾಡಿ ತೀಯಾ ಸಮಾಜದ ಮಾಜಿ ಅಧ್ಶಕ್ಷ ಭಟ್ಶಪ್ಪ ಕುಂಬ್ಳೆ ಮತ್ತು ಉಪ್ಪಳ ಭಗವತೀ ಕ್ಷೇತ್ರದ ಅಚಾರ ಪಟ್ಟದವರಾದ ಗೋಪಾಲ ಬೆಳ್ಚಪ್ಪಾಡ ಮತ್ತು ಕ್ಷೇತ್ರದ ಪುನರ್ ನಿರ್ಮಾಣ ಸಮಿತಿಯ ಪ್ರಧಾನ ಕಾರ್ಯದರ್ಶಿ ಆನಂದ ಕಲ್ಲಕಟ್ಟ ಹಾಗೂ ಸೇವಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here