ವಿಟ್ಲ: ವಿಟ್ಲ ಶ್ರೀ ಸಿದ್ಧಿಗಣಪತಿ ಸಹಿತ ವಿದ್ಯಾ ಸರಸ್ವತಿ ಮಹಾಯಾಗ ಸಮಿತಿ ಮತ್ತು ಬಾಲಗೋಕುಲ ಸಮಿತಿ ವಿಟ್ಲ ಕ್ಷೇತ್ರ ಇದರ ಸಹಯೋಗದೊಂದಿಗೆ ನಡೆಯುವ ಶ್ರೀ ಸಿದ್ಧಿಗಣಪತಿ ಸಹಿತ ವಿದ್ಯಾ ಸರಸ್ವತಿ ಮಹಾಯಾಗದ ಅಂಗವಾಗಿ ಕಾರ್ಯಾಲಯ ಉದ್ಘಾಟನೆ ಬುಧವಾರ ನಡೆಯಿತು.
ವಿಟ್ಲದ ವಿಠಲ ಪದವಿ ಪೂರ್ವ ಕಾಲೇಜಿನ ಸುವರ್ಣ ರಂಗ ಮಂದಿರದಲ್ಲಿ ಡಿ.29 ರಂದು ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ನಡೆಯುವ ಶ್ರೀ ಸಿದ್ಧಿಗಣಪತಿ ಸಹಿತ ವಿದ್ಯಾ ಸರಸ್ವತಿ ಮಹಾಯಾಗದ ಕಾರ್ಯಾಲಯವನ್ನು ಮಾಣಿಲ ಶ್ರೀಧಾಮದ ಶ್ರೀಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಸ್ವಾಮೀಜಿ ಅವರು ಉದ್ಘಾಟಿಸಿದರು.
ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ಜಗನ್ನಾಥ ಕಾಸರಗೋಡು, ಪದ್ಮನಾಭ ಕಟ್ಟೆ, ಜಗದೀಶ್ ಪಾಣೆಮಜಲು, ಮೋನಪ್ಪ ಗೌಡ ಶಿವಾಜಿನಗರ, ಸಂಜೀವ ಪೂಜಾರಿ ನಿಡ್ಯ, ಉದಯ ಕುಮಾರ್ ಆಲಂಗಾರು, ವಿನಯ ಆಲಂಗಾರು ಮತ್ತಿತರರು ಉಪಸ್ಥರಿದ್ದರು.
ಮಹಾಯಾಗ ಸಮಿತಿ ಅಧ್ಯಕ್ಷ ರಾಘವೇಂದ್ರ ಪೈ ಸ್ವಾಗತಿಸಿ, ನಿರೂಪಿಸಿದರು. ವಿಟ್ಲ ಕೇತ್ರ ಬಾಲಕೋಕುಲ ಸಮಿತಿ ಅಧ್ಯಕ್ಷ ಹರೀಶ್ ವಂದಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here