

ಕಲ್ಲಡ್ಕ: ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕ್ರೀಡೆ ಬಹಳಷ್ಟು ಪ್ರಾಮುಖ್ಯ. ಅವರ ಉಜ್ವಲ ಭವಿಷ್ಯಕ್ಕಾಗಿ ಸಂಘಟಿಸಿದ ವಾರ್ಷಿಕ ಕ್ರೀಡಾ ಕೂಟ ಪರಿಣಾಮಕಾರಿಯಾಗಿದೆ ಎಂದು ಬಂಟ್ವಾಳ ಲಯನ್ಸ್ ಕ್ಲಬ್ ಅದ್ಯಕ್ಷ ಶ್ರೀನಿವಾಸ ಪೂಜಾರಿ ಅಭಿಪ್ರಾಯಪಟ್ಟರು. ಆಡಳಿತ ಟ್ರಸ್ಟಿ ಮಹಮ್ಮದ್ ಹನೀಫ್ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದರು. ಉಮನಾಥ ರೈ ಮೆರಾವು, ಟಸ್ಟಿ ಅಹ್ಮದ್ ಮಸ್ತಾಪ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಹಮೀದಾಲಿ, ಉಪಾಧ್ಯಕ್ಷೆ ಪುಷ್ಪ, ಅಬ್ದುಲ್ ಹಮೀದ್ ಗೊಳ್ತಮಜಲ್ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕ ನಿರಂಜನ್ ಸ್ವಾಗತಿಸಿ, ಶಿಕ್ಷಕ ರಪೀಕ್ ವಂದಿಸಿದರು.ಶಿಕ್ಷಕಿ ಅನುಷಾ ಕಾರ್ಯಕ್ರಮ ನಿರೂಪಿಸಿದರು.








