ಬಂಟ್ವಾಳ: ಫರಂಗಿಪೇಟೆ ಸೇವಾಂಜಲಿ ಕಲಾ ಕೇಂದ್ರದ ಭರತನಾಟ್ಯ ತರಗತಿಯ ವಾರ್ಷಿಕ ಸಂಭ್ರಮ ನಡೆಯಿತು.


ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮೊಡಂಕಾಪು ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಮಹಾಬಲೇಶ್ವರ ಹೆಬ್ಬಾರ್ ಅವರು ಮಾತನಾಡಿ    ಉತ್ತಮ ಕಲಾವಿದನೊಬ್ಬ ದೇಶ ದ ಆಸ್ತಿ , ಉತ್ತಮ ನಾಗರಿಕನಾಗಿ ಇತರರಿಗೆ ಆದರ್ಶನಾಗಬಲ್ಲ, ಕಲೆಯನ್ನು ಒಲಿಸಿಕೊಳ್ಳಲು  ಕಠಿಣ ಪರಿಶ್ರಮ , ತ್ಯಾಗಗಳಿಂದ ಸಾಧ್ಯ ಎಂದು ಹೇಳಿದರು.    ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್ ನ ಅಧ್ಯಕ್ಷರಾದ ಸುದರ್ಶನ್ ಜೈನ್ , ಬಂಟ್ವಾಳ ತಾಲೂಕು ಪಂಚಾಯತ್ ಸದಸ್ಯ ಗಣೇಶ್ ಸುವರ್ಣ , ಪತ್ರಕರ್ತ ರಾದ ಜಯಾನಂದ ಪೆರಾಜೆ , ಪುದು ಗ್ರಾಮ  ಪಂಚಾಯತ್ ಸದಸ್ಯ ಭಾಸ್ಕರ್ ರೈ ,  ಸೇವಾಂಜಲಿ ಪ್ರತಿಷ್ಠಾನದ ಕೋಶಾಧಿಕಾರಿ ಗೋವಿಂದ ಶೆಣೈ ಮತ್ತಿತರರು ಉಪಸ್ಥಿತರಿದ್ದರು .ಈ ಸಂದರ್ಭ ನೃತ್ಯ ಗುರು ಗಳಾದ ವಿದುಷಿ ಮಂಜುಳಾ ಸುಬ್ರಮಣ್ಯರವರ ಭರತನಾಟ್ಯ ಸಭಿಕರನ್ನು ಮಂತ್ರ ಮುಗ್ದ ಗೊಳಿಸಿತು. ನೃತ್ಯ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ನೃತ್ಯಗುರುಗಳಾದವಿದುಷಿ ಮಂಜುಳಾ ಸುಬ್ರಮಣ್ಯರವರನ್ನು ಸನ್ಮಾನಿಸಿದರು. ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ ಸ್ವಾಗತಿಸಿದರು , ಸುಕೇಶ್ ಶೆಟ್ಟಿ ತೇವು  ವಂದಿಸಿದರು.