

ಬಂಟ್ವಾಳ: ಸಿದ್ದಕಟ್ಟೆ ಸರಕಾರಿ ಫ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಆಟೊಟ ಸ್ಪರ್ದೆಗಳಿಗೆ ತರಬೇತಿ ನೀಡುವ ಸ್ಥಳೀಯ ಯುವ ಕ್ರೀಡಾಪಟು ರಮೆಶ್ ಪೂಜಾರಿ ಹಲಕ್ಕೆ ಎಂಬವರನ್ನು ಶಾಲಾ ಪ್ರತಿಭಾ ಪುರಸ್ಕಾರ ಸಂದರ್ಭದಲ್ಲಿ ಅಭಿನಂದಿಸಲಾಯಿತು.
ಜಿ. ಪಂ. ಸದಸ್ಯ ತುಂಗಪ್ಪ ಬಂಗೆರ, ತಾ.ಪಂ. ಸದಸ್ಯ ಪ್ರಭಾಕರ ಪ್ರಭು, ಶಾಲಾಭಿವೃದ್ದಿ ಸಮಿತಿ ಉಪಾಧ್ಯಕ್ಷ ಉಮೆಶ್ ಗೌಡ ಮಂಚಕಲ್ಲು ಕೊಳ್ನಾಡು-ಸಾಲೆತ್ತೂರು ಲಯನ್ಸ್ ಕ್ಲಬ್ ಅಧ್ಯಕ್ಷ ಮನೊರಂಜನ್ ಕರಾಯ, ಗ್ರಾ. ಪಂ. ಸದಸ್ಯರಾದ ಎಸ್.ಪಿ.ಶ್ರೀದರ್, ಮಾದವ ಶೆಟ್ಟಿಗಾರ್, ಸುರೇಶ್ ಕುಲಾಲ್, ಉದ್ಯಮಿ ನಿತ್ಯಾನಂದ ಪೂಜಾರಿ ಕೆಂತಲೆ, ಹಳೆ ವಿದ್ಯಾರ್ಥಿ ಸಂಘ ಅದ್ಯಕ್ಷ ನೊಣಯ ಶೆಟ್ಟಿಗಾರ್, ಸಂಸ್ಥೆಯ ಉಪ ಪ್ರಾಂಶುಪಾಲ ರಮಾನಂದ ಎನ್, ರತ್ನಕುಮಾರ್ ಚೌಟ, ಮಾಜಿ ಎ.ಪಿ.ಎಮ್.ಸಿ.ಸದಸ್ಯರು ಉಪಸ್ಥಿತರಿದ್ದರು.







