ಬಂಟ್ವಾಳ: ಹಿಂದೂ ರಾಷ್ಟ್ರ ಸ್ಥಾಪನೆಗಾಗಿ’ ಹಿಂದೂ ರಾಷ್ಟ್ರ ಜಾಗೃತಿ ಸಭೆ ಎಂಬ ಶೀರ್ಷಿಕೆಯ ವಿವಾದಿತ ಬ್ಯಾನರ್ ಅಳವಡಿಸಿದ ಬಗ್ಗೆ ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಬ್ಯಾನರ್ ಅನ್ನು ತೆರವುಗೊಳಿಸಿದ ಘಟನೆ ಬಂಟ್ವಾಳ ತಾಲೂಕಿನ ಸಜಿಪನಡು ಎಂಬಲ್ಲಿ ಗುರುವಾರ ನಡೆದಿದೆ.
ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಡಿ. ೧೫ರಂದು ಸಜಿಪನಡು ಷಣ್ಮುಖಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯಲಿರುವ ಹಿಂದೂ ರಾಷ್ಟ್ರದ ಜಾಗೃತಿ ಸಭೆಗೆ ಸಂಬಂಧಿಸಿ ಹಲವು ಕಡೆಗಳಲ್ಲಿ ಬ್ಯಾನರ್‌ಗಳು ಹಾಗೂ ಕರಪತ್ರಗಳನ್ನು ಅಂಟಿಸಲಾಗಿದೆ. ಅದೇ ರೀತಿ ಸಜಿಪನಡು ಗ್ರಾಮದ ಕೋಟೆಕಣಿ ಸಾರ್ವಜನಿಕ ಸ್ಥಳದ ಕಂಬವೊಂದಕ್ಕೆ ಈ ಬ್ಯಾನರ್ ಅನ್ನು ಅಳವಡಿಸಲಾಗಿತ್ತು. ಈ ಬಗ್ಗೆ ಸಜಿಪನಡು, ಕೋಟೆಕಣಿ, ತಲೆಮೊಗರು, ಗೋಳಿಪಡ್ಪು ಹಾಗೂ ಇತರ ಸಂಘಟನೆಯ ಮುಖಂಡರು ಆಕ್ಷೇಪ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು ಎನ್ನಲಾಗಿದ್ದು, ಬಳಿಕ ಬ್ಯಾನರ್ ಅನ್ನು ತೆರವುಗೊಳಿಸಿರುವುದಾಗಿ ಹೇಳಲಾಗುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ:
ಈ ವಿಚಾರವಾಗಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೊಳಗಾಗುತ್ತಿದೆ. ಅದಲ್ಲದೆ, ಸಾರ್ವಜನಿಕರ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಇದು ವಿವಾದಕ್ಕೆ ಎಡೆ ಮಾಡಿಕೊಟ್ಟಿವೆ. ಬ್ಯಾನರ್ ಅಳವಡಿಕೆಯ ಮೂಲಕ ಪ್ರಚಾರಕ್ಕಿಂತಲೂ ವಾಟ್ಸ್‌ಆಪ್ ಸಹಿತ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಚರ್ಚೆಗೊಳಗಾಗುವ ಮೂಲಕ ಪ್ರಚಾರ ಪಡೆಯುತ್ತಿವೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here