

ವಿಟ್ಲ: ಪರವಾನಿಗೆ ಇಲ್ಲದೆ ಗೂಡಂಗಡಿಯಲ್ಲಿ ಮದ್ಯ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ಇಬ್ಬರನ್ನು ವಿಟ್ಲ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ ಘಟನೆ ಮಂಗಳಪದವಿನಲ್ಲಿ ನಡೆದಿದೆ.
ವಿಟ್ಲ ಕಸಬಾ ಗ್ರಾಮದ ಅವೆತ್ತಿಕಲ್ಲು ನಿವಾಸಿ ಶಾಂತರಾಜ್ ಶೆಟ್ಟಿ (50), ಕೈಂತಿಲ ನಿವಾಸಿ ತಿಮ್ಮಪ್ಪ (53) ಬಂಧಿತ ಆರೋಪಿಗಳು . ಖಚಿತ ಮಾಹಿತಿ ಮೇರೆಗೆ ವಿಟ್ಲ ಪೊಲೀಸರ ತಂಡ ದಾಳಿ ನಡೆಸಿದ್ದು, ಗೂಡಂಗಡಿಯ ಹಿಂಭಾಗದಲ್ಲಿ ಅಕ್ರಮವಾಗಿ ಮಧ್ಯದ ಬಾಟಲಿಗಳು ಪತ್ತೆಯಾಗಿದೆ. 90 ಎಂ ಎಲ್ ನ 48 ಬಾಟಲಿಗಳು ಪತ್ತೆಯಾಗಿದೆ. ಪರವಾನಿಗೆ ಇಲ್ಲದೆ ಸಂಗ್ರಹ ಹಾಗೂ ಮಾರಾಟದ ಬಗ್ಗೆ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.
ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪ್ರೊಬೆಷನರಿ ಎಸ್ ಐ ವಿನೋದ್ ರೆಡ್ಡಿ, ಪ್ರಭಾರ ಠಾಣಾಧಿಕಾರಿ ಎ ಎಸ್ ಐ ಧಜಂಜಯ ಮತ್ತು ಸಿಬ್ಬಂದಿಗಳು ದಾಳಿ ನಡೆಸಿದ್ದಾರೆ.








