ಬಂಟ್ವಾಳ: ಮಂಗಳವಾರ ಮುಂಜಾನೆ ನಿಧನರಾದ ಬಿಜೆಪಿ ಮುಖಂಡ, ಸಹಕಾರಿ ದುರೀಣ ಜಿ.ಆನಂದ ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆಯು ಬುಧವಾರ ನಡೆಯಿತು.
ತುಂಬೆ ಖಾಸಗಿ ಆಸ್ಪತ್ರೆಯಿಂದ ಪಾರ್ಥಿವ ಶರೀರವನ್ನು ತೆರದ ವಾಹನದಲ್ಲಿ ಇರಿಸಿಕೊಂಡು, ಬಂಟ್ವಾಳ ಬಡ್ಡಕಟ್ಟೆ ಸಮೀಪದ ದೈವಗುಡ್ಡೆಯಲ್ಲಿರುವ ಅವರ ನಿವಾಸಕ್ಕೆ ಮೆರವಣಿಗೆಯಲ್ಲಿ ತರಲಾಯಿತು.
ಈ ಸಂದರ್ಭದಲ್ಲಿ ಬಿಸಿರೋಡಿನಲ್ಲಿರುವ ಬಿಜೆಪಿ ಕಚೇರಿ ಮುಂಭಾಗದ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಯಿತು. ಶಾಸಕ ರಾಜೇಶ್ ನಾಯ್ಕ್ ಅವರು ಪಕ್ಷದ ಧ್ವಜವನ್ನು ಪಾರ್ಥಿವ ಶರೀರಕ್ಕೆ ಹೊದಿಸಿ ಗೌರವ ಸಮರ್ಪಿಸಿದರು.
ಅಂತಿಮ ಯಾತ್ರೆಯಲ್ಲಿ ಪಕ್ಷದ ಮುಖಂಡರ, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಕ್ಷಾತೀತವಾಗಿ ಪಾಲ್ಗೊಂಡಿರುವುದು ಗಮನ ಸೆಳೆಯಿತು. ಅವರ ನಿವಾಸದಲ್ಲಿಯೂ ಪಕ್ಷದ ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳು, ಅವರು ಅಧ್ಯಕ್ಷರಾಗಿದ್ದ ಬ್ಯಾಂಕಿನ ಸಿಬ್ಬಂದಿ ಗಳು, ಪುರಸಭಾ ಸಿಬ್ಬಂದಿಗಳು, ಪೌರಕಾರ್ಮಿಕರು ಅಂತಿಮ ದರ್ಶನ ಪಡೆದು, ನಮನ ಸಲ್ಲಿದರು, ಬಳಿಕ ಬಡ್ಡಕಟ್ಟೆ ಹಿಂದೂ ರುದ್ರಭೂಮಿಯಲ್ಲಿ ಒಕ್ಕಲಿಗ ಸಮುದಾಯದ ವಿಧಿವಿಧಾನಗಳ ಮೂಲಕ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

 

 

 

 

ಕಲ್ಲಡ್ಕ ಡಾ. ಪ್ರಭಾಕರ ಭಟ್, ಕಮಲಾಪ್ರಭಾಕರ ಭಟ್, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವದಾಸ ಶೆಟ್ಟಿ, ಜಿ.ಪಂ.ಸದಸ್ಯರಾದ ತುಂಗಪ್ಪ ಬಂಗೇರ, ರವೀಂದ್ರ ಕಂಬಳಿ, ಕಮಲಾಕ್ಷಿ ಕೆ.ಪೂಜಾರಿ, ಪದ್ಮಶೇಖರ್ ಜೈನ್, ತಾ.ಪಂ.ಸದಸ್ಯರಾದ ಅಬ್ಬಾಸ್ ಆಲಿ, ಪ್ರಭಾಕರ ಪ್ರಭು, ಗೀತಾ ಚಂದ್ರಶೇಖರ್, ಲಕ್ಮೀಗೋಪಾಲ ಆಚಾರ್ಯ, ಕುಲ್ಯಾರು ನಾರಾಯಣ ಶೆಟ್ಟಿ, ಮಲ್ಲಿಕಾ ವಿ. ಶೆಟ್ಟಿ, ಪುರಸಭಾ ಸದಸ್ಯರಾದ ಗೋವಿಂದ ಪ್ರಭು, ಗಂಗಾದರ ಪೂಜಾರಿ, ಹರಿಪ್ರಸಾದ್ , ರೇಖಾ ಪೈ, ಚೈತನ್ಯ ಗಣೇಶ್ ದಾಸ್, ಬಿಜೆಪಿ ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುದರ್ಶನ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರವಿಶಂಕರ್ ಮಿಜಾರು, ಮಹಿಳಾ ಮೋರ್ಚಾದ ಜಿಲ್ಲಾದ್ಯಕ್ಷ ಪೂಜಾ ಪೈ, ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ರಾಜೀವ ಶೆಟ್ಟಿ ಸಲ್ಲಾಜೆ, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಮಾಜಿ ಶಾಸಕರಾದ ಯೋಗೀಶ್ ಭಟ್, ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ರಮಾನಾಥ ರೈ, ಮಾಜಿ ವಿಧಾನಪರಿಷತ್ ಸದಸ್ಯರಾದ ಮೋನಪ್ಪ ಭಂಡಾರಿ, ಮಾಜಿ ಜಿ.ಪಂ.ಸದಸ್ಯರಾದ ಚೆನ್ನಪ್ಪ ಆರ್. ಕೊಟ್ಯಾನ್, ವಿನೋದ್ ಮಾಡ, ಮಾಜಿ ತಾ.ಪಂ. ಸದಸ್ಯರಾದ ದಿನೇಶ್ ಅಮ್ಟೂರು, ಮಾಜಿ ಮೀನುಗಾರಿಕಾ ನಿಗಮ ಅಧ್ಯಕ್ಷ ನಿತಿನ್ ಕುಮಾರ್, ವಿಶ್ವ ಹಿಂದೂ ಪರಿಷತ್ ಪ್ರಾಂತ ಗೋರಕ್ಷಕ್ ಪ್ರಮುಖ್ ಜಗದೀಶ್ ಸೇಣವ, ಬಿಜೆಪಿ ರಾಜ್ಯ ಗೋಪ್ರಕೋಷ್ಟದ ಉಪಾಧ್ಯಕ್ಷ ವಿನಯ ಎಲ್ ಶೆಟ್ಟಿ, ತಾ.ಪಂ.ಪ್ರಮುಖರಾದ ಸುಲೋಚನ ಜಿ.ಕೆ.ಭಟ್, ಅಪ್ಪಯ್ಯ ಮಣಿಯಾಣಿ, ಹರಿಕೃಷ್ಣ ಬಂಟ್ವಾಳ,ಆನಂದ ಶಂಭೂರು, ಉದಯಕುಮಾರ್ ರಾವ್ ಬಂಟ್ವಾಳ, ಅಶ್ವಿನ್ ಕುಮಾರ್ ರೈ, ಬೇಬಿ ಕುಂದರ್, , ದಿನೇಶ್ ಭಂಡಾರಿ, ರತ್ನಕುಮಾರ್ ಚೌಟ, ಬಂಗೇರ, ಜಗದೀಶ ಅಳ್ವ, ಸಂಜೀವ ಪೂಜಾರಿ, ಸುರೇಶ್ ಮೈರ, ರಂಜಿತ್ ಮೈರ, ಯಶೋಧರ ಕರ್ಬೆಟ್ಟು, ಮೋನಪ್ಪ ದೇವಸ್ಯ, ರಾಮ್ ದಾಸ ಬಂಟ್ವಾಳ , ರಮಾನಾಥ ರಾಯಿ, ವಜ್ರನಾಥ ಕಲ್ಲಡ್ಕ, ಗಣೇಶ್ ರೈ ಮಾಣಿ, ನಂದರಾಮ ರೈ, ಪುರುಷೋತ್ತಮ ವಾಮದಪದವು, ಚಿತ್ತರಂಜನ್ ಶೆಟ್ಟಿ, ರವಿರಾಜ್ ಬಿಸಿರೋಡು,
ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ರಾಜಾರಾಂ ಭಟ್, ಹಿಂದೂ ಸಂಘಟನೆಯ ಪ್ರಮುಖರಾದ ಪದ್ಮನಾಭ ನಾವೂರ, ರತ್ನಾಕರ ಶೆಟ್ಟಿ ಕಲ್ಲಡ್ಕ, ತನಿಯಪ್ಪ ನೇರಳಕಟ್ಟೆ, ಮಾಯಿಲಪ್ಪ ಸಾಲ್ಯಾನ್, ಪುಪ್ಷರಾಜ ರಾಜ್ ಶೆಟ್ಟಿ ಮಾಣಿ, ಅಶೋಕ್ ಶೆಟ್ಟಿ ಸರಪಾಡಿ, ಧನಂಜಯ ಶೆಟ್ಟಿ ಸರಪಾಡಿ, ಸನತ್ ಕುಮಾರ್ ಅನಂತಾಡಿ, ಗೋಪಾಲಕೃಷ್ಣ ಶೆಟ್ಟಿ, ನಾರಾಯಣ ಶೆಟ್ಟಿ, ರಶ್ಮಿತ್ ಶೆಟ್ಟಿ ಕೈತ್ರೋಡಿ ಮತ್ತಿತರರು ಅಂತಿಮ ದರ್ಶನ ಪಡೆದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here