


ಬಂಟ್ವಾಳ: ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ನಿರಂತರ ನಡೆಯುತ್ತಿರುವ ಉಚಿತ ಯೋಗ ಶಿಬಿರದ ಗುರುಗಳಾದ ಡಾ.ರಘವೀರ್ ಅವಧಾನಿಯವರಿಗೆ ಶಿಬಿರಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ ಜರಗಿತು. ಮಂಗಳೂರು ಯೋಗನಿಧಿ ಪತಂಜಲಿಯ ಅಧ್ಯಕ್ಷ ಡಾ.ಶಿವಪ್ರಸಾದ್ ಶೆಟ್ಟಿ ವಹಿಸಿ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳ ಆಶಯದಂತೆ ಜಾತಿ,ಮತ,ಬೇಧವಿಲ್ಲದೆ ನಡೆದ ಶಿಬಿರ ಮಾದರಿಯಾಗಿದೆ ಎಂದರು. ಗುರುವಂದನೆ ಸ್ವೀಕರಿಸಿ ಮಾತನಾಡಿದ ಯೋಗಗುರು ರಘವೀರ ಅವಧಾನಿಯವರು ಮಾತನಾಡಿ, ಬ್ರಹ್ಮಶ್ರೀ ನಾರಾಯಣಗುರುಗಳ ಪ್ರೇರಣೆಯಿಂದ ಇಲ್ಲಿಗೆ ಬರುವಂತಾಗಿದೆ ಎಂದರು. ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ಸಭಾಧ್ಯಕ್ಷತೆ ವಹಿಸಿದ್ದರು.ಸಂಘದ ಕಾರ್ಯದರ್ಶಿ ರಮೇಶ್ ತುಂಬೆ, ಬಂಟ್ವಾಳ ತಾ.ಬಿಲ್ಲವ ಮಹಿಳಾ ಘಟಕದ ಅಧ್ಯಕ್ಷೆ ಜಯಲಕ್ಷ್ಮಿ ಭುವನೇಶ್ ವೇದಿಕೆಯಲ್ಲಿದ್ದರು.ಇದೇ ವೇಳೆ ಸಹಗುರುಗಳಾದ ಸೀತಾಕಾರಂತ, ಪ್ರತಿಮಾ ಪದ್ಮನಾಭ, ಶಾಕುಂತಲಾ ಶೆಟ್ಟಿ ಅವರಿಗೂ ಗುರುವಂದನೆ ಸಲ್ಲಿಸಲಾಯಿತು.
ಎಂ.ಗೋಪಾಲ ಸ್ವಾಗತಿಸಿದರು. ಪುರುಷೋತ್ತಮ್ ಪ್ರಸ್ತಾವಿಸಿದರು. ರೇಣುಕಾ ಅನಿಲ್ ಗುರುಗಳನ್ನು ಪರಿಚಯಿಸಿದರು.ಶ್ರೀಧರ ಅಮೀನ್ ಕಾರ್ಯಕ್ರಮ ನಿರೂಪಿಸಿದರು. ತಿಲಕಶಾಂತಿ ವಂದಿಸಿದರು.







