


ಬಂಟ್ವಾಳ: ನಮ್ಮ ಮಕ್ಕಳು ಸಮಾಜದಲ್ಲಿ ಇತರರನ್ನು ನೋಡಿ ಕಲಿತುಕೊಳ್ಳುತ್ತಾರೆ.ಆದರೆ ಹಿರಿಯರಾಗಿ ನಾವು ಮಕ್ಕಳಿಗೆ ಆದರ್ಶರಾಗಿದ್ದೇವೆಯೇ, ನಾವು ಅವರನ್ನು ನ್ಯಾಯೋಚಿತ ಮತ್ತು ನೈತಿಕ-ಮೌಲ್ಯಯುತವಾದ ಬದುಕನ್ನು ರೂಪಿಸಲು ಕಲಿಸಿಕೊಡುತ್ತಿದ್ದೇವೆಯೇ ಎಂಬುದನ್ನು ಚಿಂತಿಸಬೇಕಾಗಿದೆ.ನಮ್ಮ ವರ್ತನೆ ಹಾಗೂ ನಡತೆಗಳನ್ನು ನೋಡಿಯೇ ಮಕ್ಕಳು ಕಲಿಯುತ್ತಾರೆ ಎನ್ನುವ ಅಂಶವನ್ನು ಗಮನದಲ್ಲಿರಿಸಿ ನಾವು ಮೊದಲು ಆದರ್ಶರಾಗಬೇಕಾಗಿದೆ ಎಂದು ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಹೇಳಿದರು.
ಅವರು ತುಂಬೆ ಪದವಿ-ಪೂರ್ವಕಾಲೇಜಿನ 31 ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಸರಕಾರಿ ಪ್ರೌಢಶಾಲೆ ವಗ್ಗ ಇಲ್ಲಿಯ ರಾಜ್ಯ ಶಿಕ್ಷಕ ಪ್ರಶಸ್ತಿ ವಿಜೇತ ಶಿಕ್ಷಕ ಶೇಖ್ ಆದಮ್ ಸಾಹೇಬ್ ಅವರನ್ನು ಧರ್ಮದರ್ಶಿ ಬಿ.ಅಬ್ದುಲ್ ಸಲಾಂ ಸನ್ಮಾನಿಸಿದರು. ಸನ್ಮಾನಕ್ಕೆ ಉತ್ತರಿಸಿದ ಶೇಖ್ ಆದಮ್ ಅವರು ಮಾತನಾಡಿ ತುಂಬೆ ವಿದ್ಯಾಸಂಸ್ಥೆಗಳ ಹೃದಯವಂತಿಯ ಹಿರಿಯರಿಗೆ ಕೃತಜ್ಞತೆ ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಮುಹಿಯುದ್ದೀನ್ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರಾದ ಬಿ.ಅಹ್ಮದ್ ಹಾಜಿ ಮುಹಿಯುದ್ದೀನ್ ಮಾತನಾಡುತ್ತಾ ಜ್ಞಾನವೇ ಎಲ್ಲದ್ದಕ್ಕೂ ಮೂಲವಾಗಿದೆ. ಎಲ್ಲಾ ಅಭಿವೃದ್ಧಿಯೂ ಜ್ಞಾನದಿಂದಲೇ ಸಾಧ್ಯವಾಗುತ್ತದೆ ಎಂದರು.ತುಂಬೆ ಕಾಲೇಜಿನ ಪ್ರಾಚಾರ್ಯ ಕೆ. ಎನ್. ಗಂಗಾಧರ ಆಳ್ವ ವರದಿ ವಾಚಿಸಿದರು.
ಇದೇ ಸಂದರ್ಭದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆಗೈದ ವಿದಾರ್ಥಿಗಳಾದ ಮೊಹಮ್ಮದ್ ಶರಫ್ಗಿIII ಅ, ಅಫ್ರಾಝ್ರಹಿಮಾನ್ಗಿII , ಮೊಹಮ್ಮದ್ ಶೆಹೀರ್ಗಿII , ಮೊಹಮ್ಮದ್ ಶಫೀಕ್ಗಿI , ಮೊಹಮ್ಮದ್ ಸುಹಾನ್ ಪ್ರಥಮ ವಾಣಿಜ್ಯ ವಿಭಾಗ ಇವರನ್ನು ಗೌರವಿಸಲಾಯಿತು. ಕಳೆದ ಶೈಕ್ಷಣಿಕ ಸಾಲಿನ ಪ್ರಥಮ ಸ್ಥಾನದ ವಿದ್ಯಾಥಿಗಳಾದ ರೋಹಿತ್ಎಸ್. ಹೊಳ್ಳ, ಕೀರ್ತನಾ ಲಾಲಸ, ಆಯಿಷಾ ಶಿಬಾನಾ ಎಸ್. ಬಿ., ಸಂತೋಷ್ ಇವರನ್ನು ಗುರುತಿಸಲಾಯಿತು. ಬಿ.ಅಬ್ದುಲ್ಕಬೀರ್ ಅವರು ಪುರಸ್ಕೃತರನ್ನು ಪರಿಚಯಿಸಿದರು.
ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಸ್ಪರ್ಧಾ ವಿಜೇತ ಸುಮಾರು 250 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಬಹುಮಾನ ನೀಡಿ ಅಭಿನಂದಿಸಲಾಯಿತು. ವಿದ್ಯಾಕೆ., ವೀರಪ್ಪಗೌಡ, ಕವಿತಾ ಕೆ. ಅವರು ವಿಜೇತ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು.
ತುಂಬೆ ಕಾಲೇಜಿನ ಟ್ರಸ್ಟಿ ಬಿ.ಅಬ್ದುಲ್ ಸಲಾಂ ಅವರು ಪ್ರಶಸ್ತಿ ವಿಜೇತ ಶಿಕ್ಷಕರನ್ನು ಆದಂ ಸಾಹೇಬ್ರನ್ನು ಸನ್ಮಾನಿಸಿದರು. ಕಾಲೇಜಿನ ಸಂಚಾಲಕರಾದ ಬಸ್ತಿ ವಾಮನ ಶೆಣೈ, ಪಿ.ಟಿ.ಎ. ಅಧ್ಯಕ್ಷ ಬಶೀರ್ ತಂಡೇಲ್, ಉಪಾಧ್ಯಕ್ಷ ನಿಸಾರ್ಅಹ್ಮದ್, ವಿದ್ಯಾರ್ಥಿ ನಾಯಕ-ನಾಯಕಿಯರಾದ ದ್ವಿತೀಯ ಪಿ.ಯು.ಸಿ. ವಾಣಿಜ್ಯ ವಿಭಾಗದ ಮೊಹಮ್ಮದ್ ಮುಝಾಮ್ಮಿಲ್, ದ್ವಿತೀಯ ವಿಜ್ಞಾನ ವಿಭಾಗದ ಹೀನಾ, ಮೊಹಮ್ಮದ್ ಸುಗಿದ್ 10 ನೇ ಎ ಹಾಗೂ ಅಸಿಲಾಹ 10 ನೇ ಸಿ ತರಗತಿ, 7ನೇ ತರಗತಿಯ ಮೊಹಮ್ಮದ್ ಅಝ್ಮಾನ್ ಹಾಗೂ ಅಸ್ನಾ ಮೆಹರಾಜ್ ಉಪಸ್ಥಿತರಿದ್ದರು. ಸಮಾರಂಭದಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಜಗದೀಶ್ರೈ, ದೈಹಿಕ ಶಿಕ್ಷಣ ನಿರ್ದೇಶಕ ಸಾಯಿರಾಂ ನಾಯಕ್, ಚಿತ್ರಕಲಾ ಶಿಕ್ಷಕ ದೇವದಾಸ್ ಕೆ. ಸಹಕರಿಸಿದರು. ವಿದ್ಯಾರ್ಥಿ ಅಬ್ದುಲ್ ಸಲಾಂ ಕಿರಾತ್ ಓದಿದರು. ಕಾಲೇಜು ವಿದ್ಯಾರ್ಥಿನಿಯರು ಪ್ರಾರ್ಥನೆಗೈದರು. ಉಪನ್ಯಾಸಕ ದಿನೇಶ್ ಶೆಟ್ಟಿ ಅಳಿಕೆ ಸ್ವಾಗತಿಸಿ, ವಿ.ಎಸ್. ಭಟ್ ನಿರೂಪಿಸಿದರು.ಪ್ರೌಢಶಾಲಾ ಮುಖ್ಯೋಪಾಧ್ಯಾಯ ಶ್ರೀನಿವಾಸ್ ಕೆದಿಲ ವಂದಿಸಿದರು.







