ಬಂಟ್ವಾಳ: ಕುಲಾಲ ಸಂಘ (ರಿ.)ಮಾಣಿ ಇದರ ವಾರ್ಷಿಕ ಕ್ರೀಡಾ ಕೂಟ ಡಿ.8. ರಂದು ಆದಿತ್ಯ ವಾರ ಮಾಣಿ ಗಾಂಧಿ ಮೈದಾನದಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ಬೋಜನಾರಾಯಣ ಕ್ರೀಡಾ ಕೂಟವನ್ನು ದೀಪ ಬೆಳಗಿಸಿ ಉದ್ಘಾಟಿಸಿ ದರು. ಬಳಿಕ ಮಾತನಾಡಿದ ಅವರು
ಸಮಾಜ ಬಾಂಧವರು ಕ್ರೀಡೆಯ ಮೂಲಕ ಒಟ್ಟಾಗಿ ಪರಸ್ಪರ ಸಂಬಂಧ ವನ್ನು ಗಟ್ಟಿ ಗೊಳಿಸಲು ಸಹಕಾರಿಯಾಗುತ್ತದೆ, ಎಂಬ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಿದ್ದೇವೆ.
ಸಂಘಟನೆ ಬಲಪಡಿಸಲು ಇಂತಹ ಹಲವು ಕಾರ್ಯಕ್ರಮ ಗಳನ್ನು ಹಮ್ಮಿಕೊಂಡು ನಿರಂತರ ಸಂಘದ ಶ್ರೇಯೋಭಿವೃದ್ದಿಗೆ ಶ್ರಮಿಸಲು ಎಲ್ಲರ ಸಹಕಾರ ಅಗತ್ಯ ವಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಸಂಘದ ಕಾರ್ಯದರ್ಶಿ ಪದ್ಮನಾಭ ಕೊಮ್ಮಕೋಡಿ, ಉಪಾಧ್ಯಕ್ಷ ಮೋಹನ್ ಕುಲಾಲ್ ಕಜೆ, ಕೋಶಾಧಿಕಾರಿ ಸದಾಶಿವ ಮಾಣಿ, ಕ್ರೀಡಾ ಕಾರ್ಯದರ್ಶಿ ಹರೀಶ್ ಕುಲಾಲ್ ಕರಿಮಜಲು,ಜತೆ ಕಾರ್ಯದರ್ಶಿ ಪ್ರಸಾದ್ ಕುಲಾಲ್ ಮಾಣಿ, ವಸಂತ್ ಕುಲಾಲ್ ಶಂಬುಗ, ಮಾಜಿ ಅಧ್ಯಕ್ಷ ರಾಮಚಂದ್ರ ಮಾಸ್ತರ್, ಕಾರ್ಯದರ್ಶಿ ನಾರಾಯಣ ಕುಲಾಲ್ , ಪ್ರಮುಖರಾದ ಸುದೇಶ್ ಕುಲಾಲ್ ಶಂಬುಗ, ಜನಾರ್ಧನ ಕುಲಾಲ್, ಮಾದವ ಕುಲಾಲ್ ಪೆರಾಜೆ, ಗುರುವಪ್ಪ ಕುಲಾಲ್ ಕೆದಿಲ, ಮಹಿಳಾ ಘಟಕದ ಅಧ್ಯಕ್ಷೆ ರಾಜೀವಿಚೆನ್ನಪ್ಪ ಮಾಣಿ, ಗೌರವಾಧ್ಯಕ್ಷೆ ಸುಶೀಲ ಆನಂದ ಮಾಣಿ, ಮಾಣಿ ಘಟಕದ ಅಧ್ಯಕ್ಷ ನಾಗೇಶ್ ಕುಲಾಲ್ ಮಾಣಿ, ಕಾರ್ಯ ದರ್ಶಿ ವಿಶ್ವಾಸ ಕುಲಾಲ್ ಮಾಣಿ, ಮತ್ತಿತರರು ಉಪಸ್ಥಿತರಿದ್ದರು.
ಪುರುಷ ರಿಗೆ, ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಹೀಗೆ ಮೂರು ವಿಭಾಗದಲ್ಲಿ ವಿವಿಧ ಕ್ರೀಡೆ ಗಳನ್ನು ಆಯೋಜಿಸಲಾಗಿದ್ದು, ಮಾಣಿ ಕುಲಾಲ ಸಂಘದ ವ್ಯಾಪ್ತಿಯ ಕುಲಾಲ ಸಮುದಾಯದವರು ಭಾಗವಹಿಸಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here