

ವಿಟ್ಲ: ವಿಟ್ಲ ಕಸ್ಬಾ ಗ್ರಾಮದ ನೆಕ್ಕರೆಕಾಡು ಪರಿಶಿಷ್ಟ ಪಂಗಡದ ರಸ್ತೆ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರ ರೂ. ೧೦ ಲಕ್ಷ ಅನುದಾನದಲ್ಲಿ ಅಭಿವೃದ್ಧಿಯಾಗಲಿದ್ದು, ಕಾಂಕ್ರೀಟ್ ರಸ್ತೆಯ ಕಾಮಗಾರಿಯ ಶಿಲಾನ್ಯಾಸವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಸದಸ್ಯ ರವಿಪ್ರಕಾಶ್, ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಜಯಂತ ನಾಯ್ಕ, ನಗರ ಬಿಜೆಪಿ ಅಧ್ಯಕ್ಷ ಮೋಹನದಾಸ್ ಉಕ್ಕುಡ, ಕಾರ್ಯದರ್ಶಿ ಉದಯ ಆಲಂಗಾರು, ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷೆ ಉಷಾ ಕೆ, ಸದಸ್ಯರುಗಳಾದ ರಾಮದಾಸ ಶೆಣೈ, ಶ್ರೀಕೃಷ್ಣ, ಚಂದ್ರಕಾತಿ ಶೆಟ್ಟಿ, ಇಂದಿರಾ ಅಡ್ಡಾಳಿ, ಮಂಜುನಾಥ ಕಲ್ಲಕಟ್ಟ, ಲೋಕನಾಥ ಶೆಟ್ಟಿ ಕೊಲ್ಯ, ಇಂಜಿನೀಯರ್ ಪ್ರೀತಮ್, ಬಿಜೆಪಿ ವಾರ್ಡ್ ಅಧ್ಯಕ್ಷ ಬಾಬು ಮೂಲ್ಯ ಮುಂತಾದವರು ಉಪಸ್ಥಿತರಿದ್ದರು.
ಪೋಟೊ-೬ವಿಟಿಎಲ್-ಶಿಲಾನ್ಯಾಸ- ವಿಟ್ಲ ಕಸ್ಬಾ ಗ್ರಾಮದ ನೆಕ್ಕರೆಕಾಡು ಪರಿಶಿಷ್ಟ ಪಂಗಡದ ರಸ್ತೆಗೆ ಪುತ್ತೂರು ಶಾಸಕ ಸಂಜೀವ ಮಠಂದೂರು ಶಿಲಾನ್ಯಾಸ ನೆರವೇರಿಸಿದರು.







