

ವಿಟ್ಲ: : ಶ್ರೀದೇವಿ ಪ್ರೌಢ ಶಾಲೆ, ದೇವಿನಗರ, ಪುಣಚ ಶಾಲೆಯ ಇಕೋಕ್ಲಬ್ನಿಂದ ಪರಿಸರ ಸ್ನೇಹಿ ಬಟ್ಟೆ ಕೈ ಚೀಲವನ್ನು ವಿತರಿಸಲಾಯಿತು. ಪೊಳಲಿಯ ರಾಮಕೃಷ್ಣಾಶ್ರಮದ ತಪೋವನದಲ್ಲಿ ‘ಕಸದಿಂದ ರಸ’ ಎಂಬ ಧ್ಯೇಯವಿಟ್ಟು ಬಟ್ಟೆಗಳನ್ನು ಸಂಗ್ರಹಿಸಿ ಚೀಲ ಮಾಡುವ ಯೋಜನೆ. ನೂರಾರು ಮಹಿಳೆಯರಿಗೆ ಉದ್ಯೋಗಾವಕಾಶ ನೀಡುವುದಲ್ಲದೆ, ಚೀಲದಿಂದ ಬಂದ ಹಣವನ್ನು ತಪೋವನ ಮಕ್ಳಳ ಶಿಕ್ಷಣಕ್ಕೆ ವಿನಿಯೋಗವಾಗುವುದು ಎಂದು ಇದು ಪರಿಸರ ಜಾಗೃತಿ ಕೆಲಸದಲ್ಲಿ, ಪ್ಲಾಸ್ಟಿಕ್ ಮುಕ್ತ ಪರಿಸರ ಎಂಬ ಪ್ರಧಾನಿಯವರ ಸಂಕಲ್ಪದಲ್ಲಿ ನಾವೂ ಕೈ ಜೋಡಿಸೋಣ ಎಂದು ಶಾಲಾ ಮುಖ್ಯ ಶಿಕ್ಷಕಿ ಗಂಗಮ್ಮ ತಿಳಿಸಿದರು.
ಆರೋಗ್ಯ ಇಲಾಖೆಯ ಕೌನ್ಸಿಲರ್ ಮಾಲತಿ, ಸಿಸ್ಟರ್ ಶಶಿಕಲಾ, ಆಶಾಕಾರ್ಯಕರ್ತೆ ಕಾವೇರಿ ಚೀಲಗಳನ್ನು ವಿತರಿಸಿದರು. ಸಹ ಶಿಕ್ಷಕಿ ರಜನಿ ಸ್ವಾಗತಿಸಿ, ಇಕೋಕ್ಲಬ್ನ ನಿರ್ದೇಶಕಿ ಶಿಕ್ಷಕಿ ಸವಿತಾ ವಂದಿಸಿದರು.







