ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ವಿಟ್ಲ ಇದರ ವಿಟ್ಲ ವಲಯ ಪದಾಧಿಕಾರಿಗಳ ತರಬೇತಿ ಶಿಬಿರ ವಿಠಲ ಪದವಿ ಪೂರ್ವ ಕಾಲೇಜಿನ ಸುವರ್ಣ ರಂಗ ಮಂದಿರದಲ್ಲಿ ನಡೆಯಿತು. ವಿಟ್ಲ ಯೋಜನಾಧಿಕಾರಿ ಮೋಹನ ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ವಿಟ್ಲ ವಲಯ ಮೇಲ್ವಿಚಾರಕ ರಮೇಶ್ ಮಾಹಿತಿ ನೀಡಿದರು. ವಲಯಾಧ್ಯಕ್ಷ ಜನಾರ್ಧನ ಪದ್ಮಶಾಲಿ ಅಧ್ಯಕ್ಷತೆ ವಹಿಸಿದ್ದರು.
ವಿಟ್ಲ ಎ ಒಕ್ಕೂಟದ ಸೇವಾ ಪ್ರತಿನಿಧಿ ವಿನಯ ರೈ ಸ್ವಾಗತಿಸಿದರು. ಅಳಿಕೆ ಒಕ್ಕೂಟದ ಸೇವಾ ಪ್ರತಿನಿಧಿ ನಿತ್ಯಾನಂದ ವಂದಿಸಿದರು. ಉಕ್ಕುಡ ಒಕ್ಕೂಟದ ಸೇವಾ ಪ್ರತಿನಿಧಿ ಹೇಮಲತಾ ನಿರೂಪಿಸಿದರು.
ವಿಟ್ಲ ವಲಯದ ಸೇವಾ ಪ್ರತಿನಿಧಿಗಳು, ಒಕ್ಕೂಟದ ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here