ವಿಟ್ಲ: ವಿಟ್ಲ ನಗರ ಬಿಜೆಪಿ ವಿಟ್ಲ ಭಾರತೀಯ ಅಂಚೆ ಇಲಾಖೆಯ ಸಹಯೋಗದೊಂದಿಗೆ ೪ ದಿನಗಳ ಕಾಲ ವಿಟ್ಲ ಮಾದರಿ ಶಾಲೆಯ ಸಭಾ ಭವನದಲ್ಲಿ ಆಧಾರ್ ಕಾರ್ಡ್ ತಿದ್ದುಪಡಿ ಹಾಗೂ ಹೊಸ ಆಧಾರ್ ಕಾರ್ಡ್ ನೋಂದಣಿ ಕಾರ್ಯಕ್ರಮ ನಡೆಸಲಾಯಿತು. ಈ ಸಂದರ್ಭದಲ್ಲಿ ೭೮೨ ಫಲಾನುಭಾವಿಗಳು ಇದರ ಸದುಪಯೋಗ ಪಡೆದುಕೊಂದರು.
ವಿಟ್ಲ ಕಸಬಾ ಮಾತ್ರವಲ್ಲದೆ ನೆರೆಯ ವಿಟ್ಲ ಮೂಡ್ನೂರು, ವಿಟ್ಲ ಪಡ್ನೂರು, ಕೇಪು, ಅಳಿಕೆ, ಪುಣಚ, ಮಾಣಿಲ, ಪೆರುವಾಯಿ, ಕೊಳ್ನಾಡು, ಸಾಲೆತ್ತೂರು, ವೀರಕಂಬ ಮೊದಲಾದ ಗ್ರಾಮಗಳಿಂದ ನಾಗರಿಕರು ಇದರ ಪ್ರಯೋಜನ ಪಡೆದರು. ಮುಂದಿನ ತಿಂಗಳಲ್ಲಿ ಒಂದು ದಿನದ ಕಾರ್ಯಾಗಾರ ನಡೆಸಲಾಗುವುದು ಎಂದು ವಿಟ್ಲ ನಗರ ಬಿಜೆಪಿ ಅಧ್ಯಕ್ಷ ಮೋಹನದಾಸ ಉಕ್ಕುಡ ಈ ಸಂದರ್ಭದಲ್ಲಿ ಹೇಳಿದರು. ಕಾರ್ಯದರ್ಶಿ ಉದಯಕುಮಾರ್ ಆಲಂಗಾರು ಮತ್ತು ಅಂಚೆ ಕಚೇರಿ ಸಿಬ್ಬಂದಿ ಸಹಕರಿಸಿದರು.

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here