ಬಂಟ್ವಾಳ: ಡಿ.6 (ನಾಳೆ) ರಂದು ದ.ಕ.ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದು ಮಂಗಳೂರು ಜಿಲ್ಲಾಧಿಕಾರಿ ಸಿಂದೂ ರೂಪೇಶ್ ಆದೇಶ ಹೊರಡಿಸಿದ್ದಾರೆ.


ಆಯೋಧ್ಯೆ  ಬಾಬರಿ ಮಸೀದಿ ವಿಚಾರ ಕುರಿತಂತೆ ವಿಜಯೋತ್ಸವ ಅಥವಾ ಕರಾಳ ದಿನ ಆಚರಣೆ ಗೆ ಸಂಬಂಧಿಸಿದಂತೆ ಕಾನೂನು ಸುವ್ಯವಸ್ಥೆ ಕಾಪಾಡಲು ಮುನ್ನೆಚ್ಚರಿಕೆ ಕ್ರಮವಾಗಿ ನಾಳೆ ಡಿ. ಬೆಳಿಗ್ಗೆ 6 ರಿಂದ ಡಿ. ಬೆಳಿಗ್ಗೆ 7 ರವರೆಗೆ ದ.ಕ.ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ದ.ಕ.ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ, ಸುಳ್ಯ, ಪುತ್ತೂರು, ಕಡಬ ತಾಲೂಕು ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿ ಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ನಿಷೇಧಾಜ್ಞೆ ಇರುವ ಕಡೆಗಳಲ್ಲಿ ಪಟಾಕಿ, ಪ್ರತಿಭಟನೆ, ವಿಜಯೋತ್ಸವ, ಸಾರ್ವಜನಿಕ ಸಭೆ, ರಾಜಕೀಯ ಸಭೆ ಹೀಗೆ ಯಾವುದೇ ರೀತಿಯ ಆಚರಣೆಗಳಿಗೆ ಅವಕಾಶ ವಿರುವುದಿಲ್ಲ ಎಂದು ಅದೇಶ ಹೊರಡಿಸಿದ್ದಾರೆ.
ಕಾನೂನು ಮೀರಿ ಆಚರಣೆ ನಡೆದರೆ ಅಂತಹವರ ಮೇಲೆ ಕಠಿನ ಕಾನೂನು ಕ್ರಮಕೈಗೊಳ್ಳುವುದಾಗಿಯೂ ತಿಳಿಸಲಾಗಿದೆ.‌

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here