ವಿಟ್ಲ: ಇಡ್ಕಿದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ಸಂಗ್ರಹಣೆಗೆ ಸಂಬಂಧಿಸಿದಂತೆ ಮನೆಗಳಿಗೆ ಕರಪತ್ರ ಹಂಚಿಕೆ ಕಾರ್ಯ ಬಹುತೇಕ ಮುಗಿದಿದ್ದು, ಪ್ರಾರಂಭದಲ್ಲಿ ಒಣ ಕಸು ಸಂಗ್ರಹಣೆಗೆ ಒತ್ತು ನೀಡಲು ಉದ್ದೇಶಿಸಿದ್ದು ಈ ಬಗ್ಗೆ ಮನೆಗಳಿಗೆ ಕೆಂಪು ಬಣ್ಣದ ಬಕೆಟನ್ನು 4 ಮತ್ತು 5 ರಂದು ವಿತರಿಸುವುದು ಹಾಗೂ 9ನೇ ದಿನಾಂಕದಿಂದ ತ್ಯಾಜ್ಯ ಸಂಗ್ರಹಣೆಗೆ ಚಾಲನೆ ನೀಡುವ ಬಗ್ಗೆ ಇಡ್ಕಿದು ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಯಿತು. ಸ್ವಚ್ಛತೆಗೆ ಸಂಬಂಧಿಸಿದಂತೆ ಫಲಕಗಳನ್ನು ಗ್ರಾಮ ವ್ಯಾಪ್ತಿಯಲ್ಲಿ ಅಳವಡಿಸುವಂತೆ ನಿರ್ಣಯಿಸಲಾಯಿತು. ಕಂಬಳಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಿ.15 ರಿಂದ ಶ್ರೀ ಭಾರತಿ ಕಾಲೇಜು ಮಂಗಳೂರು ಇವರ ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರವು ನಡೆಯಲಿದ್ದು ಡಿ.19 ರಂದು ಸ್ವಚ್ಚತಾ ಕಾರ್ಯಕ್ರಮವು ನಡೆಯಲಿದ್ದು ಗ್ರಾಮ ಪಂಚಾಯಿತಿ ಸಹಕಾರ ನೀಡುವ ಬಗ್ಗೆ ಅನುಮೋದಿಸಲಾಯಿತು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಕಬಡ್ಡಿ ಕ್ರೀಡಾ ಕೂಟದಲ್ಲಿ ಭಾಗವಹಿಸಿರುವ ಕಬಡ್ಡಿ ಕ್ರೀಡಾಪಟು ಚೇತನ್ ಗೌಡ ಕೂವೆತ್ತಿಲ ಅವರಿಗೆ ಗ್ರಾಮ ಪಂಚಾಯಿತಿಯ ಕ್ರೀಡಾ ನಿಧಿಯಿಂದ ಪ್ರೋತ್ಸಾಹಧನದ ಚೆಕ್‌ನ್ನು ನೀಡಲಾಯಿತು. ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೀರಪಳಿಕೆಯಲ್ಲಿ ರಸ್ತೆ ಚರಂಡಿಗೆ ಹೊಂದಿಕೊಂಡಂತೆ ಕೆರೆ ಇದ್ದು ವಾಹನ ಚಾಲಕ, ಸವಾರರಿಗೆ ಅಪಾಯಕಾರಿಯಾಗಿರುತ್ತದೆ. ಈ ಬಗ್ಗೆ ಜಮೀನಿನ ಮಾಲಕರಿಗೆ ಗ್ರಾಮ ಪಂಚಾಯಿತಿಯಿಂದ ತುರ್ತಾಗಿ ಕೆರೆಯನ್ನು ಮುಚ್ಚುವ ಕುರಿತು ನೋಟೀಸು ನೀಡುವುದು ಹಾಗೂ ಲೋಕೋಪಯೋಗಿ ಇಲಾಖೆಗೆ ಈ ಬಗ್ಗೆ ಮಾಹಿತಿಯನ್ನು ನೀಡುವ ಬಗ್ಗೆ ನಿರ್ಣಯಿಸಲಾಯಿತು.
ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಾವತಿ. ಉಪಾಧ್ಯಕ್ಷರಾದ ಎಂ.ಸುಧೀರ್ ಕುಮಾರ್ ಶೆಟ್ಟಿ ಮಿತ್ತೂರು, ಪಿಡಿಒ ಅಧಿಕಾರಿ ಗೋಕುಲ್‌ದಾಸ್ ಭಕ್ತ, ಸದಸ್ಯರಾದ ರತ್ನ, ರಸಿಕಾ, ಜಯರಾಮ ಕಾರ್ಯಾಡಿಗುತ್ತು, ಚಿದಾನಂದ ಪೆಲತ್ತಿಂಜ, ಶಾರದಾ, ಕೇಶವ ಯು, ವಸಂತಿ, ಪ್ರೇಮಾ, ಸತೀಶ್ ಕೆಂರ್ದೆಲು, ಬೇಬಿ, ರಮೇಶ ಸೂರ್ಯ, ಜಗದೀಶ್ವರಿ, ಆಶಾ, ಉಮಾ ಎ ,ಆರೋಗ್ಯ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here