ಮಂಚಿ: ಭಾರತದ ಭವಿಷ್ಯ ಮಕ್ಕಳ ಬೆಳವಣಿಗೆಯಲ್ಲಿ ಅಡಗಿದೆ. ಮಕ್ಕಳು ಸುಸಂಸ್ಕ್ರತರಾಗಿ ಬೆಳೆದಾಗ ಅವರು ಬಹುದೊಡ್ಡ ಮಾನವ ಸಂಪನ್ಮೂಲ ವಾಗುತ್ತದೆ. ಇದರಿಂದ ದೇಶ ಸಧ್ರಡವಾಗಿ ಅಭಿವೃದ್ಧಿಯಾಗುತ್ತದೆ. ಎಂದು ಬಂಟ್ವಾಳ ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಅಬ್ಬಾಸ್ ಆಲಿ ನುಡಿದರು.
ಅವರು ಮಂಚಿ ಕಜೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಮಕ್ಕಳ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಣೆ ಮಾಡಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷರಾದ ಸುಮಿತ್ರ ವಹಿಸಿದ್ದರು. ಶಾಲಾ ಸಮಿತಿಯ ನಿಕಟ ಪೂರ್ವ ಅಧ್ಯಕ್ಷರಾದ ಅಬೂಬಕ್ಕರ್‍ ನಿರ್ಬೈಲ್, ಜಯಪ್ರಕಾಶ್ ರೈ ಮೇರಾವು, ಉಪಾಧ್ಯಕ್ಷರಾದ ಸುನಂದ, ನಿವೃತ್ತ ಶಿಕ್ಷಕಿ ವಾರಿಜ ಟೀಚರ್‍, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಪುರುಷೋತ್ತಮ ಪೂಜಾರಿ ಪಡೀಲ್, ಮುಖ್ಯೋಪಾಧ್ಯಾಯರು ಜೆಸಿಂತ ಡಿಸಿಲ್ವ, ಶಿಕ್ಷಕರಾದ ಮಹಮ್ಮದ್ ಮತ್ತು ನಾಗರಿಕರು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here