

ಬಂಟ್ವಾಳ: ಕಾನ್ ರಿಯೂ ಆರ್.ವಿ. ಟೈಗರ್ಸ್ ಮಾರ್ಷಲ್ ಆರ್ಟ್ ಕರಾಟೆ ಡೋ ಕರ್ನಾಟಕ ಇದರ ವತಿಯಿಂದ ಕರಾಟೆಯಲ್ಲಿ ವಿಜೇತ ಸಾಧಕರಿಗೆ ಅಭಿನಂದನಾ ಸಮಾರಂಭ ಬಿ.ಸಿ.ರೋಡಿನ ಶ್ರೀ ಅನ್ನಪೂರ್ಣೆಶ್ವರೀ ದೇವಸ್ಥಾನದ ಸಭಾಂಗಣದಲ್ಲಿ ಭಾನುವಾರ ನಡೆಯಿತು.
ನಾವೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಜೀವನ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ಕರಾಟೆ ಆತ್ಮರಕ್ಷಣೆಗೆ ಅಗತ್ಯ, ದೈಹಿಕ ಶಕ್ತಿ ನೀಡುವುದಲ್ಲದೆ ಮಾನಸಿಕ ಶಕ್ತಿಯನ್ನು ನೀಡುತ್ತದೆ ಎಂದರು.
ಕರಾಟೆ ತರಬೇತುದಾರ ಸೆನ್ಸಾಯ್ ವಸಂತ ಕೆ. ಬಂಗೇರ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಅವರು ಮಾತನಾಡಿ ಕರಾಟೆ ವಿದ್ಯೆ ಗೊತ್ತಿದ್ದರೆ ಮಾತ್ರ ಸಾಲದು ಅದರಲ್ಲಿ ಸಂಪೂರ್ಣ ಪಳಗಬೇಕು. ತಾಳ್ಮೆ, ಪರಿಶ್ರಮದಿಂದ ಗೆಲುವು ಸಾಧಿಸಲು ಸಾಧ್ಯವಿದೆ, ಪೋಷಕರ ಸಹಕಾರದಿಂದಾಗಿ ಇಂತಹ ಸಾಧನೆ ಮಾಡಲು ಸಾದ್ಯವಾಗಿದೆ ಎಂದು ತಿಳಿಸಿದರು. ವೈದ್ಯೆ ಡಾ. ಜಯಪ್ರದ, ನಾಟಿ ವೈದ್ಯ ವಿಶ್ವನಾಥ ಪೂಜಾರಿ ಕೂರಿಯಾಳ ಉಪಸ್ಥಿತರಿದ್ದರು.
ಹಿಲರಿ ಲೋಬೋ ಹಾಗೂ ಸವಿತಾ ಡಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಸಂಸ್ಥೆಯ 63 ಮಂದಿ ಹಾಗೂ ರಾಜ್ಯಮಟ್ಟದ ಸ್ಪರ್ಧೆಯಲ್ಲಿ 31 ವಿದ್ಯಾರ್ಥಿಗಳು ಬಹುಮಾನ ಗೆದ್ದುಕೊಂಡಿದ್ದಾರೆ.








