

ವಿಟ್ಲ: ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ. ಸಂಘ ಸಂಸ್ಥೆಗಳು ಶಾಲೆಯ ಜತೆಗೆ ಕೈಜೋಡಿಸಿದಾಗ ಯಶಸ್ವಿ ಕಾರ್ಯಗಳನ್ನು ಮಾಡಬಹುದು. ಸ್ವರ್ಣಮಹೋತ್ಸವ ಸಂಭ್ರಮವನ್ನು ಎಲ್ಲರೂ ಜತೆಯಾಗಿ ಮಾಡಿದಾಗ ಅರ್ಥಪೂರ್ಣವಾಗಿರುತ್ತದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಜಯಶ್ರೀ ಕೋಡಂದೂರು ಹೇಳಿದರು.
ಅವರು ಕುದ್ದುಪದವು ಸರಕಾರಿ ಪರಿಶಿಷ್ಟ ವರ್ಗಗಳ ಆಶ್ರಮ ಶಾಲೆಯ ಸುವರ್ಣ ಮಹೋತ್ಸವ ಸಂಭ್ರಮದ ವಿಜ್ಞಾಪನಾ ಪತ್ರ ಬಿಡುಗಡೆ ಮಾಡಿ ಮಾತನಾಡಿದರು. ಜಿಲ್ಲಾ ಪಂಚಾಯಿತಿಯಲ್ಲಿರುವ ಅವಕಾಶಗಳನ್ನು ನೋಡಿಕೊಂಡು ಅನುದಾನ ನೀಡುವ ಪ್ರಯತ್ನ ಮಾಡಲಾಗುವುದು ಎಂದರು.
ಕೇಪು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಯಶಸ್ವಿನಿ ಶಾಸ್ತ್ರಿ ನೆಕ್ಕರೆ, ಸುವರ್ಣ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ರಾಧಾಕೃಷ್ಣ ಪೈ ಅಡ್ಯನಡ್ಕ, ಅಧ್ಯಕ್ಷ ಪ್ರಭಾಕರ ಶೆಟ್ಟಿ ದಂಬೆಕಾನ, ಗೌರವ ಸಲಹೆಗಾರರಾದ ಪಿ. ರೇವಣ್ಣ ನಾಯ್ಕ, ರಮೇಶ ಎಂ. ಬಾಯಾರು, ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಬೇಂಗ್ರೋಡಿ ಮತ್ತಿತರರು ಉಪಸ್ಥಿತರಿದ್ದರು.
ಶಿಕ್ಷಕಿ ಗೀತಾ ಕುಮಾರಿ ಸ್ವಾಗತಿಸಿದರು. ನಿಲಯ ಮೇಲ್ವಿಚಾರಕಿ ಪ್ರಮೀಳಾ ಹೆಚ್. ವಂದಿಸಿದರು. ಶಿಕ್ಷಕಿ ಭವ್ಯ ಪಿ. ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ತುಳಸಿ ಸಹಕರಿಸಿದರು.








