

ವಿಟ್ಲ: ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆಗಳ ಸಂಸ್ಥಾಪಕರಾದ ಮಡಿಯಾಲ ನಾರಾಯಣ ಭಟ್ಟರ ೯೩ನೇ ಜನ್ಮ ದಿನೋತ್ಸವ, ಪಿಯುಸಿ ವಿಭಾಗದ ಬಹುಮಾನ ವಿತರಣಾ ಸಮಾರಂಭ ನಡೆಯಿತು.
ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಹಿರಿಯ ವಿದ್ಯಾರ್ಥಿ ಬೆಂಗಳೂರು ಎಂ.ಡಿ. ಕುಂದೂರು ಕನ್ಸ್ಟ್ರಕ್ಷನ್ ಬೆಂಗಳೂರು ಕೆ.ವಿ. ಬಸವನ ಗೌಡ, ಭವಿಷ್ಯ ನಿಧಿ ಅಧಿಕಾರಿ ಅರ್ಸ್ಲಾನ್ ಮಹಮ್ಮದ್ ಕಿತ್ತೂರ್ ಬಹುಮಾನ ವಿತರಣೆ ಮಾಡಿದರು.
ಸಂಸ್ಥೆಯ ಸಂಚಾಲಕರಾದ ಕೆ.ಎಸ್. ಕೃಷ್ಣ ಭಟ್ ಸಭಾಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಎಸ್. ಚಂದ್ರಶೇಖರ ಭಟ್ ಇತರ ಹಿರಿಯರು, ವಿದ್ಯಾರ್ಥಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
ಉಪನ್ಯಾಸಕರಾದ ಪ್ರಮೋದ್ ಹೆಚ್. ಹಾಗೂ ಅಜಿತ್ ಕುಮಾರ್ ವಿಜೇತರ ಪಟ್ಟಿ ವಾಚಿಸಿದರು. ಪ್ರಿನ್ಸಿಪಾಲ್ ಡಾ| ಸಿದ್ದರಾಜು ಸ್ವಾಗತಿಸಿದರು. ವೈಸ್ಪ್ರಿನ್ಸಿಪಾಲ್ ಡಿ. ರಾಮಚಂದ್ರ ರಾವ್ ವಂದಿಸಿದರು. ಉಪನ್ಯಾಸಕ ಯಾದವ ಎನ್. ಕಾರ್ಯಕ್ರಮ ನಿರೂಪಿಸಿದರು.








