Friday, October 27, 2023

ಬದ್ರಿಯಾ ಜುಮಾ ಮಸೀದಿ ಬೊಳ್ಳಾಯಿ ಇದರ 2019-20ರ ನೂತನ ಪದಾದಿಕಾರಿಗಳ ಆಯ್ಕೆ

Must read

ವಿಟ್ಲ : ಸಜಿಪ ಮೂಡ ಗ್ರಾಮದ ಬೊಳ್ಳಾಯಿ ಬದ್ರಿಯ ಜುಮಾ ಮಸೀದಿ ಇದರ ನೂತನ ಪದಾದಿಕಾರಿಗಳ ಆಯ್ಕೆ ಪ್ರಕ್ರಿಯೆ ಮಸೀದಿಯಲ್ಲಿ ಇತ್ತೀಚೆಗೆ ಸೈಯದ್ ಆಟಕೊಯ ತಂಙಲ್ ಕುಂಬೊಲ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಬದ್ರಿಯಾ ಜುಮಾ ಮಸೀದಿ ಬೊಳ್ಳಾಯಿ ಇದರ ಖತೀಬಾರದ ಅಬ್ಬಾಸ್ ಸಹದಿ ಅಫ್ಲಲಿ ಉಪಸ್ಥಿತರಿದ್ದರು.

ನೂತನ ಅಧ್ಯಕ್ಷರಾಗಿ ಬಿ.ಎಸ್. ಮೂನಾಕ ಎ-ವನ್ ಉಪಾಧ್ಯಕ್ಷರಾಗಿ ಬಿ.ಎಸ್.ಅಬ್ಬಾಸ್ ಕಂಜಿಲ, ಕಾರ್ಯದರ್ಶಿಯಾಗಿ ಫಿ.ಜೆ ಸಲೀಮ್ ಜಾಡಕೋಡಿ, ಜೊತೆ ಕಾರ್ಯದರ್ಶಿಯಾಗಿ ಪಿ.ಬಿ. ಅಬ್ದುಲ್ ಕುಂಙಿ, ಎನ್.ಅಬ್ದುಲ್ ಕರೀಂ ನಗ್ರಿ, ಕೋಶಾದಿಕಾರಿಯಾಗಿ ಕೆ.ಎಚ್ ಹೈದರ್,
ಲೆಕ್ಕಪರಿಶೊದಕರಾಗಿ ಜಿ.ಇಸ್ಮಾಯಿಲ್, ಹಾಗೂ ಸಲಹೆಗಾರರಾಗಿ ಪಿ.ಬಿ ಅಬೂಬಕ್ಕರ್ ಅವರು ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಬಿ ಎಂ ಲತೀಪ್ ಪಟ್ಟುಗುಡ್ಡೆ, ಬಿ.ಬಿ ರಝಾಕ್ , ನಝೀರ್ ಹಾಜಿ , ಟಿ ಉಮರಬ್ಬ , ಬಿ.ಎಂ ಮುಸ್ತಾಪ, ಬಿ.ಎ.ಉಮರಬ್ಬ , ಬಿ.ಎ ಹನೀಫ್, ಸಾದಿಕ್ ಕಂಜಿಲ, ಹಸನ್ ಜಾಡಕೋಡಿ ಹಾಗೂ ಬಿ.ಐ.ಬಿ. ಆಝೀಝ್ ಅವರನ್ನು ನೇಮಿಸಲಾಯಿತು.

More articles

Latest article