

ಬಂಟ್ವಾಳ: ಕಾಂಗ್ರೇಸ್ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯ ಹಾಗೂ ಅತನ ಪತ್ನಿಗೆ ಮಾರಣಾಂತಿಕ ಹಲ್ಲೆ ನಡೆಸಿದ ಪರಾರಿಯಾದ ಪ್ರಕರಣ ಕ್ಕೆ ಸಂಬಂಧಿಸಿದಂತೆ ಬಂಟ್ವಾಳ ವೃತ್ತ ನಿರೀಕ್ಷಕ ಟಿ. ಡಿ.ನಾಗರಾಜ್ ನೇತ್ರತ್ವದ ಎಸ್.ಐ.ಪ್ರಸನ್ನ ಅವರ ತಂಡ ಘಟನೆ ನಡೆದ ಕೆಲವೇ ಗಂಟೆ ಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿ ಯಾಗಿದೆ.
ಆರೋಪಿಗಳಾದ ಪ್ರಸಾದ್ ಬೆಳ್ಚಾಡ, ಶ್ರೀಪತಿ ಆಚಾರ್ಯ ಹಾಗೂ ಕಾರ್ತಿಕ್ ಆಚಾರ್ಯ ಅವರನ್ನು ಕಟೀಲು ಸಮೀಪ ಬಂಧಿಸುವಲ್ಲಿ ಯಶಸ್ವಿ ಯಾಗಿದ್ದಾರೆ.
ಘಟನೆಯ ವಿವಿರ :
ಪತಿ ಪತ್ನಿ ಇಬ್ಬರಿಗೆ ತಂಡವೊಂದು ಮನೆಗೆ ನುಗ್ಗಿ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾದ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಮೇರೆಮಜಲು ಎಂಬಲ್ಲಿ ಇಂದು ಮುಂಜಾನೆ ವೇಳೆ ನಡೆದಿತ್ತು.
ಮೇರೆಮಜಲು ನಿವಾಸಿ ಪಂಚಾಯತ್ ಸದಸ್ಯ ಯೋಗೀಶ್ ಪ್ರಭು ಮತ್ತು ಆತನ ಪತ್ನಿ ಶೋಭಾ ಅವರು ಗಾಯಗೊಂಡವರು.
ಮುಂಜಾನೆ ಸುಮಾರು 4 ಗಂಟೆಯ ವೇಳೆ ಈ ಘಟನೆ ನಡೆದಿದ್ದು ಗಂಭೀರ ಗಾಯಗೊಂಡ ಇಬ್ಬರನ್ನೂ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮೇರೆಮಜಲು ನಿವಾಸಿ ರೌಡಿಶೀಟರ್ ಪ್ರಸಾದ್ ಬೆಳ್ಚಾಡ ಮತ್ತು ಆತನ ಜೊತೆ ಇಬ್ಬರು ಸ್ನೇಹಿತರು ಸೇರಿ ತಲವಾರಿನಿಂದ ಹಲ್ಲೆ ನಡೆಸಿದ್ದಾರೆ ಎಂದು ಯೋಗೀಶ್ ಪ್ರಭು ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆ ಗೆ ದೂರು ನೀಡಿದ್ದಾರೆ.
ಮುಂಜನೆ 4 ಗಂಟೆಯ ವೇಳೆ ಪ್ರಸಾದ್ ಬೆಳ್ಚಾಡ ಮತ್ತು ಅತನ ಇಬ್ಬರು ಸ್ನೇಹಿತರು ಯೋಗೀಶ್ ಪ್ರಭು ಅವರ ಮನೆಗೆ ಬಂದು ಬಾಗಿಲು ಬಡಿದು ಎಚ್ಚರಿಸಿ ಬಾಗಿಲು ತೆರೆಯುವಂತೆ ಕೇಳಿಕೊಂಡಿದ್ದಾರೆ. ಬಾಗಿಲು ತೆರೆಯುತ್ತಿದ್ದಂತೆ ಮನೆಯೊಳಗೆ ನುಗ್ಗಿ ಏಕಾಏಕಿ ತಲವಾರಿನಿಂದ ಯೋಗೀಶ್ ಪ್ರಭು ಮೇಲೆ ಪ್ರಶಾದ್ ಬೆಳ್ಚಾಡ ಹಲ್ಲೆ ನಡೆಸಿದ್ದಾನೆ ಈ ಸಂದರ್ಭದಲ್ಲಿ ಜೊತೆಯಲ್ಲಿದ್ದ ಪತ್ನಿ ಶೋಭಾ ಅವರಿಗೂ ಗಾಯಗಳಾಗಿವೆ.
*ವೈಯಕ್ತಿಕ ಹಳೆಯ ದ್ವೇಷ ಕಾರಣ?:*
ಈ ಹಲ್ಲೆಗೆ ಹಳೆಯ ವೈಯಕ್ತಿಕ ದ್ವೇಷ ವೇ ಕಾರಣವಾಗಿರಬಹುದು ಎಂಬುದನ್ನು ಪೋಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಪ್ರಕರಣವೊಂದಕ್ಕೆ ಸಂಬಂದಿಸಿದಂತೆ ಪ್ರಸಾದ್ ಬೆಳ್ಚಾಡ ಅವರ ಹೆಸರನ್ನು ಯೋಗೀಶ್ ಪ್ರಭು ಅವರು ದುರ್ಬಳಕೆ ಮಾಡಿ ಠಾಣೆಗೆ ದೂರು ನೀಡಿದ್ದಾರೆ ಎಂದು ಅವರ ಕೆಲ ವರ್ಷಗಳ ಹಿಂದೆ ಹಲ್ಲೆ ನಡೆಸಿದ್ದ . ಈ ಬಗ್ಗೆ ಯೂ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯ ಲ್ಲಿ ದೂರು ದಾಖಲಾಗಿತ್ತು. ಅ ಬಳಿಕವೂ ಇವರ ಮಧ್ಯೆ ದ್ವೇಷದ ಕಿಡಿ ಹಾರಿರಲಿಲ್ಲ.
ಮತ್ತೆ ಅದೇ ವೈಯಕ್ತಿಕ ಹಳೆಯ ದ್ವೇಷ ವೇ ಈ ಹಲ್ಲೆಗೆ ಕಾರಣವಾಗಿರಬಹುದು ಎಂದು ಹೇಳಲಾಗಿದೆ, ವಿಚಾರಣೆ ಮುಂದುವರಿದಿದೆ.
*ಆರೋಪಿಗಳ ಪತ್ತೆಗೆ ತಂಡ ಕಾರ್ಯಪ್ರವೃತ್ತ:*
ಬಂಟ್ವಾಳ ವೃತ್ತ ನಿರೀಕ್ಷಕ ಟಿ. ಡಿ.ನಾಗರಾಜ್ ಅವರ ನೇತ್ರತ್ವದಲ್ಲಿ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯ ಎಸ್.ಐ. ಪ್ರಸನ್ನ ಅವರ ತಂಡ ಆರೋಪಿಗಳ ಪತ್ತೆಗೆ ಬಲೆಬೀಸಿ ಘಟನೆ ನಡೆದ ಕೆಲವೇ ಗಂಟೆಯಲ್ಲಿ ಆರೋಪಿಗಳನ್ನು ಕಟೀಲು ಎಂಬಲ್ಲಿ ವಶಕ್ಕೆಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಘಟನಾ ಸ್ಥಳಕ್ಕೆ ಬೇಟಿ ನೀಡಿದ ಎಸ್.ಪಿ.ಲಕ್ಮೀಪ್ರಸಾದ್ ಬೇಟಿ ನೀಡಿ ಪರಿಶೀಲನೆ ನಡೆಸಿ, ಸಂಪೂರ್ಣ ಮಾಹಿತಿ ಪಡೆದುಕೊಂಡ ಅವರು ಶೀಘ್ರವಾಗಿ ಆರೋಪಿಗಳ ಪತ್ತೆಗೆ ಕ್ರಮಕೈಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದರು.







