Wednesday, October 18, 2023

ಶ್ರೀರಾಮ ಪದವಿ ಕಾಲೇಜಿನಲ್ಲಿ ನ.30ರಂದು ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳ

Must read

ಬಂಟ್ವಾಳ: ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯ, ಕಲ್ಲಡ್ಕ ಇದರ ದಶಮಾನೋತ್ಸವದ ಅಂಗವಾಗಿ ಲಯನ್ಸ್ ಕ್ಲಬ್ ಬಂಟ್ವಾಳ, ಎಮ್‌ಆರ್‌ಪಿಎಲ್ ಮಂಗಳೂರು, ಮಹಿಮಾ ಫೌಂಡೇಶನ್(ರಿ), ಬಂಟ್ವಾಳ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಮಂಗಳೂರು ಹಾಗೂ ಶ್ರೀರಾಮ ಪದವಿ ಕಾಲೇಜು ಕಲ್ಲಡ್ಕ ಇದರ ಸಂಯುಕ್ತ ಆಶ್ರಯದಲ್ಲಿ ಬೃಹತ್ ಉದ್ಯೋಗ ಮೇಳ ನ.30ನೇ ಶನಿವಾರ ಬೆಳಗ್ಗೆ 9 ಕ್ಕೆ ಉದ್ಘಾಟನೆಗೊಳ್ಳಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟ್ವಾಳ ತಾಲೂಕು ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ವಹಿಸಲಿದ್ದಾರೆ. ಕಾರ್ಯಕ್ರಮವನ್ನು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇಲ್ಲಿನ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ಇವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಲಯನ್ಸ್ 317 ಆ ಜಿಲ್ಲೆಯ ಮೊದಲನೇ ಉಪಜಿಲ್ಲಾ ರಾಜ್ಯಪಾಲ ಡಾ| ಗೀತ್ ಪ್ರಕಾಶ್, ಲಯನ್ಸ್ 317 ಆ ಜಿಲ್ಲೆಯ ಎರಡನೇ ಉಪಜಿಲ್ಲಾ ರಾಜ್ಯಪಾಲ ವಸಂತ್ ಶೆಟ್ಟಿ, ನಾಲ್ಕನೇ ವಲಯ ಅಧ್ಯಕ್ಷ ಸುಧಾಕರ ಆಚಾರ್ಯ, ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಮಂಗಳೂರು ಜಿಲ್ಲಾ ಉದ್ಯೋಗಾಧಿಕಾರಿ ಶೈಲಜಾ ಕೆ., ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ಇದರ ಸಂಚಾಲಕ ವಸಂತ ಮಾಧವ, ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಗೋಳ್ತಮಜಲು ಸದಸ್ಯೆ ಕಮಲಾಕ್ಷಿ ಕೆ. ಪೂಜಾರಿ, ತಾಲೂಕು ಪಂಚಾಯತ್ ಸದಸ್ಯೆ ಲಕ್ಷ್ಮೀ ಗೋಪಾ ಆಚಾರ್ಯ, ಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷ ವಿಠ್ಠಲ ನಾಯ್ಕ ಆಗಮಿಸಲಿದ್ದಾರೆ.
ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ(ಎಂಎ, ಎಂಕಾಂ ಎಂಎಸ್ಸಿ), ಐಟಿಐ, ಡಿಪ್ಲೊಮಾ, ಬಿಇ, ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲು ಆಸಕ್ತರಿರುವ ಉದ್ಯೋಗಾಕಾಂಕ್ಷಿಗಳೂ(ಬಿಎಡ್) ಭಾಗವಹಿಸಬಹುದು.
ಓಷಿಯನ್ ಪರ್ಲ್, ದಿಯಾ ಸಿಸ್ಟಮ್ಸ್, ವಿನ್‌ಮ್ಯಾನ್ ಸಾಫ್ಟ್‌ವೇರ್ ಇಂಡಿಯಾ, ಎಲ್&ಟಿ ಫೈನಾನ್ಸ್, ತೇಜಾ ಟೆಕ್ನಿಕಲ್ ಸರ್ವೀಸ್, ಉಬರ್ ಇಂಡಿಯಾ ಸಿಸ್ಟಮ್ಸ್ ಪ್ರೈ. ಲಿ., ಎನ್‌ಟಿಟಿಎಫ್ ಬೆಂಗಳೂರು ಆಂಡ್ ಸಿಐಪಿಇಟಿ,(ಅಂಡರ್ ಎಮ್‌ಆರ್‌ಪಿಎಲ್ ಸ್ಪಾನ್ಸರ್‌ಶಿಪ್), ಬ್ರೈಟ್ ಹೆಚ್‌ಆರ್ ಸೊಲ್ಯುಷನ್ ಆಂಡ್ ಸರ್ವೀಸಸ್, ಹಿಂದುಜಾ ಗ್ಲೋಬಲ್ ಸೊಲ್ಯುಷನ್ ಆಟೊಮ್ಯಾಟ್ರಿಕ್ಸ್, ಇನ್‌ಫಿವೇ ಗ್ಲೋಬಲ್, ಹೊಂಡಾ ಮ್ಯಾಟ್ರಿಕ್ಸ್, ಸನ್‌ಬ್ರೈಟ್ ಮ್ಯಾನ್‌ಪವರ್ ಸೊಲ್ಯುಷನ್ ಪ್ರೈ. ಲಿ., ಪಿಎಮ್‌ಕೆಕೆ ಮಂಗಳೂರು, ನೋವಲ್, ಎಸ್‌ಬಿಐ ಕಾರ್ಡ್, ಭಾರತ್ ಆಟೋ ಮೋಟಾರ್‍ಸ್ ಪ್ರೈ. ಲಿ., ಮುತ್ತೂಟ್ ಫಿನ್‌ಕಾರ್ಪ್, ಬಿಎಸ್‌ಎಲ್ ಇಂಡಿಯಾ ಪ್ರೈ. ಲಿ., ಯುರೇಕಾ ಫಾರ್‍ಬ್ಸ್, ಸಾಮಂತ ಮೈಕ್ರೋ ಫೈನಾನ್ ಲಿ., ಎಸ್‌ಬಿಎಮ್‌ಎಸ್ ಹೋಂಡಾ, ಕ್ಷಿತಿಜಾ ಎಂಟರ್‌ಪ್ರೈಸಸ್, ಮಾಂಡೊವಿ ಮೋಟಾರ್‍ಸ್ ಪ್ರೈ. ಲಿ., ಎಬಿಎಫ್ ಗ್ರೂಪ್ ಆಫ್ ಕಂಪೆನೀಸ್, ಸುಮೇರು ಗ್ರೂಪ್ ಆಫ್ ಮ್ಯಾನೇಜ್‌ಮೆಂಟ್, ಕೆಎಸ್‌ಆರ್‌ಟಿಸಿ, ಏರ್‌ಟೆಲ್, ಈಕ್ವಲೈಸ್ ಆರ್‌ಸಿಎಮ್, ಗಾನ್ ಇನ್ಸ್ಟಿಟ್ಯೂಟ್, ಪ್ರಕಾಶ್ ರಿಟೇಲ್ ಪ್ರೈ. ಲಿ.,(ಹರ್ಷ), ಐಡಿಬಿಐ ಫೆಡರಲ್ ಲೈಫ್ ಇನ್ಶೂರೆನ್ಸ್, ಕಂ.ಲಿ., ಶ್ರೀ ಸಾಯಿ ಎಂಟರ್‌ಪ್ರೈಸಸ್, ತಿರುಮಲ ಹೋಂಡಾ, ಎಮ್‌ಇಡಿಪ್ಲಸ್, ಆರ್ಚಿಡ್ ದಿ ಇಂಟರ್‌ನ್ಯಾಶನಲ್ ಸ್ಕೂಲ್, ಲೇಬರ್ ನೆಟ್ ಸರ್ವೀಸ್ ಇಂಡಿಯಾ ಪ್ರೈ. ಲಿ., ಲೈಟ್‌ನಿಂಗ್, ಲೋಹಾಟೆಕ್ ಪ್ರೆಸಿಷನ್ ಪ್ರೈ. ಲಿ., ಡಿಡಿಯುಜಿಕೆವೈ, ಮುತ್ತೂಟ್ ಫೈನಾನ್ಸ್, ಸಂಭವ್ ಫೌಂಡೇಶನ್, ಸ್ಪಂದನಾ ಬ್ರೈಟ್ ಫ್ಯೂಚರ್ ಇನೋವೇಶನ್, ಜಸ್ಟ್ ಡಯಲ್, ಸ್ವಿಗ್ಗಿ, ಇತ್ಯಾದಿ ಕಂಪೆನಿಗಳು ಭಾಗವಹಿಸಲಿವೆ. ಹಾಗೂ ಯಾವುದೇ ನೋಂದಣಿ ಶುಲ್ಕ ಇರುವುದಿಲ್ಲ ಎಂದು ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ ಕಾಯರ್‌ಕಟ್ಟೆ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

More articles

Latest article