

ಬಂಟ್ವಾಳ: ಮಹಿಳೆಯೋರ್ವಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಸಿದ್ದಕಟ್ಟೆ ಸಮೀಪದ ಕರ್ಪೆ ಮುಗೇರು ಎಂಬಲ್ಲಿ ನಡೆದಿದೆ.
ಮುಗೇರು ನಿವಾಸಿ ಅಭಯ್ ಜೈನ್ ಅವರ ಪತ್ನಿ ಪ್ರತಿಭಾ ಜೈನ್ (35) ಅವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ.
ಪ್ರತಿಭಾ ಅವರ ಗಂಡ ಮುಂಜಾನೆ 5 ಗಂಟೆಯ ವೇಳೆ ಹಾಸನ ದಲ್ಲಿ ನಡೆಯುವ ಸಂಬಂಧಿಕರ ಮದುವೆಗೆ ತೆರಳಿ ದ ಬಳಿಕ ಸುಮಾರು 6 ಗಂಟೆಯ ವೇಳೆ ಪ್ರತಿಭಾ ಅವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರತಿಭಾ ಅವರಿಗೆ ಸಣ್ಣ ಪ್ರಾಯದ ಇಬ್ಬರು ಗಂಡು ಮಕ್ಕಳು.
ಆತ್ಮಹತ್ಯೆ ಗೆ ಮಾವನ ಮಾನಸಿಕ ಕಿರುಕುಳವೇ ಕಾರಣ ದೂರು: ಪ್ರತಿಭಾ ಅವರ ಆತ್ಮಹತ್ಯೆ ಗೆ ಮಾವ ಭುಜಬಲಿ ಅವರೇ ಕಾರಣ ಎಂದು ಪ್ರತಿಭಾ ಅವರ ತಂದೆ ಚಿಕ್ಕಮಗಳೂರು ಸಂಶೆ ನಿವಾಸಿ ಜಿನರಾಜಯ್ಯ ಅವರು ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಗೆ ದೂರು ನೀಡಿದ್ದು ಸಮಗ್ರವಾದ ತನಿಖೆ ಗೆ ಒತ್ತಾಯಿಸಿದ್ದಾರೆ.
ಭುಜಬಲಿ ಅವರ ಪತ್ನಿ ಕಿಡ್ನಿ ವೈಫಲ್ಯ ದಿಂದ ಕಳೆದ ಎರಡು ತಿಂಗಳ ಹಿಂದೆ ತೀರಿ ಹೋಗಿದ್ದು ಅವರು ಮರು ಮದುವೆಯ ತಯಾರಿಯಲ್ಲಿದ್ದರು, ಈ ವಿಷಯದಲ್ಲಿ ಮನೆಯಲ್ಲಿ ಕೆಲವೊಂದು ಸಣ್ಣಪುಟ್ಟ ವಿಚಾರಗಳು ವೈಮನಸ್ಸಿಗೆ ಕಾರಣವಾಗಿತ್ತು ಎಂದು ಹೇಳಲಾಗುತ್ತಿದೆ. ಜೊತೆಗೆ ಭುಜಬಲಿ ಅವರು ಪ್ರತಿಭಾ ಅವರಿಗೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದರು, ಇದೇ ಅವರು ಆತ್ಮಹತ್ಯೆ ಗೆ ಕಾರಣ ಎಂದು ದೂರು ಕೂಡಾ ದಾಖಲಾಗಿದೆ.
ಸ್ಥಳಕ್ಕೆ ಬಂಟ್ವಾಳ ವೃತ್ತ ನಿರೀಕ್ಷಕ ಟಿ. ಡಿ.ನಾಗರಾಜ್ ಗ್ರಾಮಾಂತರ ಪೋಲೀಸ್ ಠಾಣೆಯ ಎಸ್.ಐ.ಪ್ರಸನ್ನ ಹಾಗೂ ಸಿಬ್ಬಂದಿ ಗಳು ಬೇಟಿ ನೀಡಿದ್ದಾರೆ.







