ಪುಣಚ: ಪುಣಚ ಗ್ರಾಮದ ದಂಬೆ-ನಾರ್ಣಡ್ಕ ಪರಿಶಿಷ್ಟ ಪಂಗಡ ಕಾಲೊನಿ ರಸ್ತೆಯ ಶಿಲಾನ್ಯಾಸ ಕಾರ್ಯಕ್ರಮ ನಾರ್ಣಡ್ಕ ಎಂಬಲ್ಲಿ ನಡೆಯಿತು.
ಪುತ್ತೂರು ಶಾಸಕ ಸಂಜೀವ ಮಠಂದೂರು ಅವರ ಕ್ಷೇತ್ರಾಭಿವೃದ್ಧಿಯ 10 ಲಕ್ಷ ರೂ. ಅನುದಾನದಿಂದ ಕಾಂಕ್ರೀಟಿಕರಣಗೊಳ್ಳುವ ಈ ರಸ್ತೆ ಕಾಮಗಾರಿಗೆ ಶಾಸಕರು ಶಿಲಾನ್ಯಾಸಗೈದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಜಯಶ್ರೀ ಕೋಡಂದೂರು, ಬಿ.ಜೆ.ಪಿ. ಗ್ರಾಮಾಂತರ ಮಂಡಲ ಕಾರ್ಯದರ್ಶಿ ರಾಮಕೃಷ್ಣ ಬಿ. ಮೂಡಂಬೈಲು, ಬಿ.ಜೆ.ಪಿ ಗ್ರಾಮ ಸಮಿತಿ ಅಧ್ಯಕ್ಷ ಹರೀಶ ಎಂ, ಪ್ರಧಾನ ಕಾರ್ಯದರ್ಶಿ ಪ್ರವೀಣ ದೇವಿನಗರ, ಪಂಚಾಯಿತಿ ಸದಸ್ಯರಾದ ಉದಯ ಕುಮಾರ್ ದಂಬೆ, ಜಯರಾಮ ಕಾನ, ಓ ಜಯಂತ ಗೌಡ, ಇಲಾಖಾಧಿಕಾರಿಗಳು, ಸ್ಥಳೀಯ ಮುಖಂಡರು ಇದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here