

ಬಂಟ್ವಾಳ: ಮೂಲ ಸೌಕರ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ಎಸ್ಡಿಪಿಐ ಬಂಟ್ವಾಳ ಪುರಸಭಾ ಸಮಿತಿ ವತಿಯಿಂದ ಪುರಸಭೆಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ಬಂಟ್ವಾಳ ಪುರಸಭೆ ವ್ಯಾಪ್ತಿಯ ವಾರ್ಡ್ ನಂಬ್ರ 16ರ ನಂದರಬೆಟ್ಟು ಪ್ರದೇಶದಲ್ಲಿ ಕೊಳಚೆ ನೀರು ಹರಿದು ಹೋಗಲು ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲದೇ ಸಮೀಪದ ಬಾವಿಗಳಿಗೆ ಸೇರುತ್ತಿವೆ. ಅದಲ್ಲದೇ ಈ ವಾರ್ಡ್ನ ಮದ್ದ, ಪರ್ಲಿಯಾ ಪ್ರದೇಶದಲ್ಲೂ ಈ ಸಮಸ್ಯೆಯಿದ್ದು, ಬಾವಿಗಳ ನೀರು ಕುಡಿಯಲು ಯೋಗ್ಯವಾಗಿಲ್ಲ. ಈ ಪ್ರದೇಶದಲ್ಲಿ ಕೊಳಚೆ ನೀರು ಹರಿಯಲು ಯೋಗ್ಯವಾದ ಚರಂಡಿ ವ್ಯವಸ್ಥೆಯನ್ನು ಕಲ್ಪಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಬಂಟ್ವಾಳ ಪುರಸಭೆಯ ಗೂಡಿನಬಳಿ(ವಾಡ್ ನಂಬ್ರ-13), ಕೈಕುಂಜೆ (ವಾಡ್ ನಂಬ್ರ-14), ಪರ್ಲಿಯಾ, ನಂದರಬೆಟ್ಟು, ಮದ್ದ ಈ ಪ್ರದೇಶಗಳಲ್ಲಿ ಕಸ ವಿಲೆವಾರಿಯಾಗದೇ ಗಬ್ಬು ವಾಸನೆ ಬೀರುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ ಎಂದು ಮನವಿಯಲ್ಲಿ ದೂರಲಾಗಿದೆ.
ಬಂಟ್ವಾಳ ಕೆಳಗಿನ ಪೇಟೆಯಲ್ಲಿ ನೀರಾವ ಕಾಮಾಗಾರಿಯನ್ನು ಆದಷ್ಟು ಬೇಗ ಪೂರ್ತಿಗೊಳಿಸಬೇಕು. ವಾರ್ಡ್ ನಂಬ್ರ 1ರ ಲೊರೆಟ್ಟೋಪದವು ಟಿಪ್ಪುನಗರದ ಅಂಗವಾಡಿ ಕೇಂದ್ರದ ಪ್ರದೇಶದಲ್ಲಿ ರಸ್ತೆಗೆ ಇಂಟರ್ಲಾಕ್ ಅಳವಡಿಸುವಂತೆ ಹಾಗೂ ಈ ಎಲ್ಲ ಸಮಸ್ಯೆಗಳನ್ನು ಬಂಟ್ವಾಳ ಪುರಸಭೆಯು ಮನಗಂಡು ಇದಕ್ಕೆ ಸೂಕ್ತ ಪರಿಹಾರವಂತೆ ಇಲ್ಲವಾದರೆ ಊರಿನ ನಾಗರಿಕರನ್ನು ಒಟ್ಟುಗೂಡಿಸಿ ಪಕ್ಷದ ವತಿಯಿಂದ ಬಂಟ್ವಾಳ ಪುರಸಭೆಗೆ ಮುತ್ತಿಗೆ ಹಾಕಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ಮುನೀಶ್ ಅಲಿ, ಇದ್ರೀಸ್ ಪಿ.ಜೆ., ಝೀನತ್, ಸಂಶಾದ್, ಎಸ್ಡಿಪಿಐ ಸಮಿತಿ ಉಪಾಧ್ಯಕ್ಷ ಆತಿಕ್, ಸದಸ್ಯರಾದ ಬಶೀರ್ ಪಲ್ಲ, ಸಾದಿಕ್ ನಂದರಬೆಟ್ಟು, ನಿಝಾರ್ ಟಿಪ್ಪುನಗರ, ಅಬ್ದುಲ್ ಲತೀಫ್ ಬಂಟ್ವಾಳ, ಅಲ್ತಾಫ್ ಟಿಪ್ಪುನಗರ ಹಾಜರಿದ್ದರು.








