Saturday, October 28, 2023

ನಾಪತ್ತೆಯಾದವರನ್ನು ಹುಡುಕಿಕೊಡುವಂತೆ ಗ್ರಾಮಾಂತರ ಠಾಣೆಗೆ ದೂರು

Must read

ಬಂಟ್ವಾಳ: ಎರಡು ವರ್ಷಗಳ ಹಿಂದೆ ನಾಪತ್ತೆಯಾದವರು ಈವರೆಗೆ ಪತ್ತೆಯಾಗಿಲ್ಲ ಎಂದು ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
ಮಂಚಿ ಗ್ರಾಮದ ಕಂಚಿಲ ನಿವಾಸಿ ಸುಂದರ ನಾಯ್ಕ
(46) ನಾಪತ್ತೆಯಾದವರು.
ಪೆ.27-2017 ರಂದು ಮನೆಯಿಂದ ಕೂಲಿ ಕೆಲಸಕ್ಕೆ ಎಂದು ಹೋದವರು ಮನೆಗೆ ಬಂದಿಲ್ಲ ಎಂದು ಅವರ ಸಹೋದರ ಮೋನಪ್ಪ ನಾಯ್ಕ ಅವರು ಗ್ರಾಮಾಂತರ ಪೋಲೀಸ್ ಠಾಣೆ ಯಲ್ಲಿ ದೂರು ನೀಡಿದ್ದರು. ಅದರೆ ಈವರೆಗೆ ಪತ್ತೆಯಾಗದ ಹಿನ್ನೆಲೆಯಲ್ಲಿ ಮತ್ತೆ ಅವರ ಪತ್ತೆ ಮಾಡಿಕೊಡುವಂತೆ ಅವರು ದೂರಿನಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.‌
ವಿಪರೀತ ಕುಡಿತದ ಚಟ ಹೊಂದಿದ್ದ ಇವರ ಗುರುತು ಪತ್ತೆಯಾದಲ್ಲಿ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯ ನ್ನು ಸಂಪರ್ಕಿಸುವಂತೆ ಅವರು ಕೋರಿದ್ದಾರೆ.

More articles

Latest article