ಮಹಾಭಾರತದಲ್ಲಿ ಶ್ರೀಕೃಷ್ಣನ್ನು ಪ್ರಪಂಚದಲ್ಲಿ ಅಧರ್ಮ ಯಾವಾಗ ಹೆಚ್ಚಾಗುತ್ತೋ, ಅದನ್ನು ಮಟ್ಟ ಹಾಕಿ ಧರ್ಮವನ್ನು ಪುನರ್ಸ್ಥಾಪಿಸಲು ನಾನು ಮತ್ತೆ ಜನ್ಮ ತಾಳುತ್ತೇನೆ ಹೇಳಿದ ಮಾತು ಐತಿಹ್ಯವಿದೆ. ಭಾರತದ ನೆಲದಲ್ಲಿ ಅಶಾಂತಿ, ದೌರ್ಜನ್ಯ, ಮತಾಂತರ ಹೀಗೆ ನಮ್ಮ ಆಚಾರ ಪರಂಪರೆಗೆ ಧಕ್ಕೆಯಾದ ಸಂದರ್ಭದಲ್ಲಿ ಅನೇಕ ಯುಗ ಪುರುಷರು ಜನ್ಮ ತಾಳಿದ್ದಾರೆ. ಹಾಗೆ ಜನಿಸಿದವರಲ್ಲಿ *ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿಜಿಯವರು.* ತಮ್ಮದೇ ಆದ ರೀತಿಯಲ್ಲಿ ದುಷ್ಟ ಪದ್ಧತಿಗಳಿಂದ ಜನತೆಯನ್ನು ಉದ್ಧರಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು. ” *ಒಂದೇ ಜಾತಿ ಒಂದೇ ಮತಒಂದೇ ದೇವರು* ” ಇವರು ಪ್ರತಿಪಾದಿಸಿದ ತತ್ವಗಲ್ಲಿ ಮುಖ್ಯವಾದದ್ದು.

ಈ ತತ್ವಗಳನ್ನು ಇಟ್ಟುಕೊಂಡು ಯಾವುದೇ ಜಾತಿ, ಧರ್ಮ ಇಲ್ಲದೆ ಮನುಷ್ಯತ್ವವೇ ನಮ್ಮ ಧರ್ಮ ಎನ್ನುವ ಪರಿಕಲ್ಪನೆಯೊಂದಿಗೆ ಸಮಾಜದ ಎಲ್ಲ ವರ್ಗದ ಅಶಕ್ತರನ್ನು ಸಶಕ್ತರನ್ನಾಗಿಸಬೇಕೆಂದು *ಕಟೀಲು ಅಮ್ಮನವರ* ಅನುಗ್ರಹದಿಂದ *ಜನ ಸೇವೆಯೇ ಜನಾರ್ದನ ಸೇವೆ* ಎಂಬ ಉದ್ದೇಶವನ್ನು ಇಟ್ಟುಕೊಂಡು ಕಳೆದ 38 ತಿಂಗಳ ಹಿಂದೆ ರಚನೆಗೊಂಡ ನಮ್ಮ ಹೆಮ್ಮೆಯ *ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ)* ಸಂಸ್ಥೆ 103 ಸೇವಾ ಯೋಜನೆಯ ಮೂಲಕ ಸುಮಾರು 27 ಲಕ್ಷ ಅಧಿಕ ಧನ ಸಹಾಯವನ್ನು ನೊಂದವರ ಪಾಲಿಗೆ ನೀಡಿದ್ದು, ಇದು ತನ್ನ 39ನೇ ತಿಂಗಳ ಮಾಸಿಕ ಸೇವಾ ಯೋಜನೆಯಲ್ಲಿ ಆಯ್ಕೆ ಮಾಡಿದ ಫಲಾನುಭವಿಗಳಾದ *ಮೆದುಳು ಕ್ಯಾನ್ಸರ್ ನಿಂದ ಬಳಲುತ್ತಿರುವ ಮಂಗಳೂರು ತಾಲೂಕು ಸುರತ್ಕಲ್ ಕಾಟಿಪಳ್ಳ ಚರ್ಚ್ ರೋಡ್ ನ 3ನೇ ಬ್ಲಾಕ್ ನ ಕಾಮಾಕ್ಷಿ ನಿಲಯದ ಹರೀಶ್ ಬಂಗೇರ* ಇವರ ಚಿಕಿತ್ಸೆಗೆ ರೂ. 20,000 ಚೆಕ್ ಮತ್ತು *ಹೃದಯ ಸಂಬಂಧಿತ ಲಂಗ್ಸ್ ಖಾಯಿಲೆಯಿಂದ ಬಳಲುತ್ತಿರುವ ಮಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಸುಶ್ಮಿತ್ ಕುಮಾರ್* ಅವರ ಚಿಕಿತ್ಸೆಗೆ ರೂ. 20,000 ಚೆಕ್ ಅನ್ನು ಇಂದು *ಶ್ರೀ ಮುನೀಶ್ವರ ಮಹಾಗಣಪತಿ ಪೊಲೀಸ್ ಲೆನ್ ಮಂಗಳೂರು* ಇಲ್ಲಿ 24.11.2019ನೇ ಆದಿತ್ಯವಾರ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ವಾಹಕರು ಮತ್ತು ಸದಸ್ಯರು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here