ವಿಟ್ಲ: ಹಳೆವಿದ್ಯಾರ್ಥಿ ಯುವಕ ಮಂಡಲ (ರಿ) ಮಂಕುಡೆ ಕುಡ್ತಮುಗೇರು ಇದರ ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಂಕುಡೆ ಶ್ರೀ ವಿಷ್ಣುಮೂರ್ತಿ ಭಜನಾ ಮಂದಿರದ ಕಲಾಮಂಟಪದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳೂರು ಇದರ ಪ್ರಾಯೋಜಕತ್ವದಲ್ಲಿ ಭಾಗವತರಾದ ಮಾದಕಟ್ಟೆ ಈಶ್ವರ ಭಟ್ ಮತ್ತು ಬಳಗ ಬಂಟ್ವಾಳ ಇವರಿಂದ ಗದಾಯುದ್ಧ ಎಂಬ ಪೌರಾಣಿಕ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಳ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುಭಾಶ್ಚಂದ್ರ ಶೆಟ್ಟಿ ಕುಳಾಲು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉದ್ಯಮಿಗಳಾದ ದಿನಕರ ಭಟ್ ಮಾವೆ, ಚಲನಚಿತ್ರ ನಟ ಕಾರ್ಕಳ ಶೇಖರ ಭಂಡಾರಿ ಭಾಗವಹಿಸಿದ್ದರು.
ವೇದಿಕೆಯಲ್ಲಿ ಸಂಚಾಲಕರಾದ ರಮೇಶ್ ಮಂಕುಡೆ, ಅಧ್ಯಕ್ಷರಾದ ವೇಣುಗೋಪಾಲ್ ಆಚಾರ್ಯ ಮಂಕುಡೆ, ಉಪಾಧ್ಯಕ್ಷರಾದ ಪದ್ಮನಾಭ ಮಂಕುಡೆ, ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್ ಪೂಜಾರಿ ಪರ್ತಿಪ್ಪಾಡಿ, ಕೋಶಾಧಿಕಾರಿಗಳಾದ ರೋಹಿನಾಥ ಪೂಜಾರಿ ಪರ್ತಿಪ್ಪಾಡಿ ಮೊದಲಾದವರು ಉಪಸ್ಥಿತರಿದ್ದರು.
ಪ್ರಜ್ಞಾಶಂಕರಿ ಎಂ.ಎನ್ ಪ್ರಾರ್ಥಿಸಿದರು. ಜೊತೆ ಕಾರ್ಯದರ್ಶಿಗಳಾದ ಕೀರ್ತಿಶ್ ಪೂಜಾರಿ ಪೇರಪಡ್ಪು ಸ್ವಾಗತಿಸಿದರು. ಸ್ಥಾಪಕ ಸದಸ್ಯರಾದ ಸುಂದರ ದೇವಾಡಿಗ ಗುಳಿಗಲ್ಲಗುರಿ ವಂದಿಸಿದರು. ಪರಮೇಶ್ವರ ಆಚಾರ್ಯ ಮಂಕುಡೆ ನೆಡ್ಯಾಳ ಕಾರ್ಯಕ್ರಮ ಸಂಯೋಜಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here