

ವಿಟ್ಲ: ಬೊಬ್ಬೆಕ್ಕೇರಿ ಖದೀಜತುಲ್ ಖುಬ್ರಾ ಮಸೀದಿ ಮತ್ತು ಮುನೀರುಲ್ ಇಸ್ಲಾಂ ಮದರಸದ ’ಮೀಲಾದ್ ಫೆಸ್ಟ್’ ಕಾರ್ಯಕ್ರಮವು ಅಧ್ಯಕ್ಷ ಬಶೀರ್ ಬೊಬ್ಬೆಕ್ಕೇರಿ ವರ ಆದ್ಯಕ್ಷತೆಯಲ್ಲಿ ನಡೆಯಿತು.
ವಿಟ್ಲ ಕೇಂದ್ರ ಜುಮಾ ಮಸೀದಿಯ ಖತೀಬ್ ಮಹಮ್ಮದ್ ಅಲಿ ಫೈಝಿ ಮುಖ್ಯ ಪ್ರಭಾಷಣ ನಡೆಸಿದರು.
ಈ ಸಂದರ್ಭ ಮದರಸದ ಮಕ್ಕಳಿಗೆ ವಿವಿಧ ಸ್ಪರ್ಧೆ ಗಳನ್ನು ಏರ್ಪಡಿಲಾಗಿತ್ತು. ಮಸೀದಿಯ ಪ್ರ ಕಾರ್ಯದರ್ಶಿ ಶಮೀರ್ ಪಳಿಕೆ,ಸಾಹಿತ್ಯ ವೇದಿಕೆಯ ಜಿಲ್ಲಾಧ್ಯಕ್ಷ ಅಬೂಬಕರ್ ಅನಿಲಕಟ್ಟೆ, ಹಕೀಂ ಅರ್ಶದಿ,ಅಬ್ದುಲ್ ಖಾದರ್ ಬೊಬ್ಬೆಕ್ಕೇರಿ, ಅಬ್ದುಲ್ ಖಾದ್ರಿ ,ಶೈನ್ ಮೇಗಿನಪೇಟೆ ಮುಖ್ಯ ಅತಿಥಿಗಳಾಗಿದ್ದರು. ಮುಅಲ್ಲಿಂ ಹನೀಫ್ ಲತೀಫಿ ಉದ್ಘಾಟಿಸಿದರು., ಝುಬೈರ್ ಪಳಿಕೆ ಸ್ವಾಗತಿಸಿದರು. ಮುನೀರ್ ಬೊಬ್ಬೆಕ್ಕೇರಿ ವಂದಿಸಿದರು.ರಹೀಂ ಪಳಿಕೆ ನಿರೂಪಿಸಿದರು.ಇಕ್ಬಾಲ್ ಕೋಡಿ ಸಹಕರಿಸಿದರು.







