


ಬಂಟ್ವಾಳ: ಪುಂಜಾಲಕಟ್ಟೆಯ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ನ 36ನೇ ವರ್ಷದ ಪ್ರಯುಕ್ತ ದ.ಕ. ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಸಹಭಾಗಿತ್ವದಲ್ಲಿ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ನ.17 ರಂದು ಜರಗಿದ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಪ್ರಶಸ್ತಿ ಪ್ರೊ ಕಬಡ್ಡಿ ಪಂದ್ಯಾಟದಲ್ಲಿ ಮುಕ್ತ ವಿಭಾಗದಲ್ಲಿ ಆನಿಯ ದರ್ಬಾರ್ ಮಡಂತ್ಯಾರು ಮತ್ತು 60 ಕೆ.ಜಿ. ವಿಭಾಗದಲ್ಲಿ ವೆಲ್ಕಂ ತೊಕ್ಕೊಟ್ಟು ಪ್ರಥಮ ಸ್ಥಾನಪಡೆದಿದೆ.
ಫಲಿತಾಂಶ: ಮುಕ್ತ ವಿಭಾಗ- ದ್ವಿತೀಯ: ಬ್ರದರ್ಸ್ ,ಅಡ್ಕೆರೆ, ತೃತೀಯ: ನಯನ್ ಬೇಕರಿ,ನಯನಾಡು, ಚತುರ್ಥ: ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್,ಪುಂಜಾಲಕಟ್ಟೆ
60 ಕೆ.ಜಿ. ವಿಭಾಗ-ದ್ವಿತೀಯ:ಸುಲ್ತಾನ್ ಅಟೇಕರ್ಸ್ ,ಸುನ್ನತ್ ಕೆರೆ, ತೃತೀಯ: ಫ್ರೆಂಡ್ಸ್ ,ದೇವಿನಗರ, ಚತುರ್ಥ: ಸ್ವಾಮಿ ಕೊರಗಜ್ಜ ,ಕೊಕ್ಕಡ.
ಮಹಿಳಾ ವಿಭಾಗ-ಪ್ರಥಮ: ಕಾರ್ಸ್ಟ್ರೀಟ್ ಪಿ.ಯು. ಕಾಲೇಜ್, ದ್ವಿತೀಯ: ಎಸ್.ಡಿ.ಎಂ. ಉಜಿರೆ, ತೃತೀಯ: ಎಸ್.ಡಿ.ಎಂ. ಉಜಿರೆ, ಚತುರ್ಥ: ಪ್ರಗತಿ ಪಿ.ಯು.ಕಾಲೇಜ್ ಕಣಿಯೂರು







