ನವೆಂಬರ್ ೧೧ರಿಂದ ಲೋಕಕಲ್ಯಾಣಾರ್ಥವಾಗಿ ಮತ್ತು ಸಮಸ್ತ ದೋಷ ನಿವಾರಣೆಗಾಗಿ ಮಾಣಿಗುತ್ತು ಉಳ್ಳಾಲ್ತಿ, ಗುಡ್ಡೆ ಚಾಮುಂಡಿ, ಪಂಜುರ್ಲಿ, ಮಲೆಕೊರತಿ ದೈವಗಳ ಚಾವಡಿ ಯಲ್ಲಿ ಆಯೋಜಿಸಲಾದ ಶ್ರೀ ಮದ್ ಭಾಗವತ ಸಪ್ತಾಹ ಕಾರ್ಯಕ್ರಮ ವಿವಿಧ ದಾರ್ಮಿಕ ವಿಧಿ ವಿದಾನಗಳೊಂದಿಗೆ ಸಂಪನ್ನಗೊಂಡಿತ್ತು.

ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ಉಪಸ್ಥಿತಿ ಮತ್ತು ಮಾರ್ಗದರ್ಶನ ದಲ್ಲಿ ಭಾಗವತಾಚಾರ್ಯ ವೇ| ಮೂ| ಶ್ರೀ ನಾರಾಯಣ ಮೂರ್ತಿ ಗುರುಪುರಂ,ಕಾಂಞಂಗಾಡ್ ಇವರ ನೇತ್ರತ್ವದಲ್ಲಿ ಜರುಗಿದ ಈ ಪುಣ್ಯ , ಕಾರ್ಯಕ್ರಮ ಮಾಣಿ ಗ್ರಾಮದಲ್ಲಿ ಅಲ್ಲದೆ ಮೊಗರನಾಡು ಸೀಮೆಯಲ್ಲೇ ಮೊದಲ ಶ್ರೇಷ್ಟ ಭಾಗವತ ಸಪ್ತಾಹ ಕಾರ್ಯಕ್ರಮ ಎಂಬ ಮುನ್ನುಡಿಗೆ ಪ್ರಾಪ್ತವಾಯಿತು.ಗ್ರಾಮದ ಶ್ರೇಯಸ್ಸಿಗಾಗಿ ದೇವತಾರಾಧನೆ, ಗತಿಸಿದ ಪ್ರೇತಾತ್ಮಗಳಿಗೆ ಮೋಕ್ಷ , ಯಜ್ಞಚಾರ್ಯರಿಗೆ ಗೌರವಾರ್ಪಣೆ,ಅನ್ನದಾನ,ಪುರಾಣ-ಪಾರಾಯಣ ಪ್ರವಚನ, ಜ್ಞಾನ ಸತ್ರ ಹೀಗೆ ಹಲವಾರು ಸಂಗತಿಗಳು ಮಾಣಿಯ ಮಣ್ಣಿನಲ್ಲಿ ದೈವಗಳ ಸಾನಿದ್ಯ ವೃದ್ದಿಯಾಗಿ ಮಾಣಿ, ಅರೆಬೆಟ್ಟು ಗ್ರಾಮಸ್ಥರಿಗೆ ಮತ್ತು ಈ ಜ್ಞಾನ ಯಜ್ಞದಲ್ಲಿ ಭಾಗವಹಿಸಿದ ಎಲ್ಲರಿಗೂ ಮುಂದಿನ ದಿನಗಳಲ್ಲಿ ಒಳ್ಳೆಯದು ಆಗೇ ಆಗುತ್ತದೆ ಎಂಬ ಭರವಸೆ ಎಲ್ಲರಲ್ಲೂ ಮೂಡಿಸಿದೆ. ಸಂಪೂರ್ಣ ಕೇರಳೀಯ ಶೈಲಿಯ ಭಾಗವತ ಸಪ್ತಾಹ ದ ಯಶಸ್ಸಿನ ಹಿಂದೆ ಮಾಣಿ ಗುತ್ತಿನ ಕುಟುಂಬದ ಸದಸ್ಯರ ಜೊತೆಯಲ್ಲಿ ಕಾರ್ಯಕ್ರಮ ದ ಯಶಸ್ಸಿಗೆ ದುಡಿದ ಸ್ವಯಂ ಸೇವಕರು, ಭಕ್ತಾದಿಗಳು, ಶ್ರೀ ದೇವರ ಸೇವೆಯಿಂದ ಕೃತಾರ್ಥರಾಗಿದ್ದಾರೆ ಎಂಬುದು ಸಂತಸದ ವಿಷಯ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here