ಅಡ್ಯನಡ್ಕ: ಇಲ್ಲಿನ ಜನತಾ ಪ್ರೌಢಶಾಲೆಯಲ್ಲಿ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನೀಡಲಾದ
ಉಚಿತ ಬೈಸಿಕಲ್‌ಗಳನ್ನು ನ. 20ರಂದು ವಿತರಿಸಲಾಯಿತು.
ದ. ಕ. ಜಿಲ್ಲಾ ಪಂಚಾಯತ್ ಸದಸ್ಯೆ ಜಯಶ್ರೀ ಕೋಡಂದೂರು ಅವರು ಪೋಷಕರ ಸಮಕ್ಷಮದಲ್ಲಿ ಬೈಸಿಕಲ್‌ಗಳನ್ನು ವಿತರಿಸಿ
ಮಾತನಾಡಿದರು. ಜನತಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಟಿ. ಆರ್. ನಾಯ್ಕ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಕೇಪು ಗ್ರಾಮ
ಪಂಚಾಯತ್ ಸದಸ್ಯ ಹಾಗೂ ಶಾಲಾ ಆಡಳಿತ ಮಂಡಳಿ ಸದಸ್ಯ ಅಬ್ದುಲ್ ಕರೀಮ್ ಕುದ್ದುಪದವು, ವಾರ್ಡ್ ಸದಸ್ಯರಾದ ಸುಮಿತ್ರಾ
ಹಾಗೂ ಮಾಲತಿ, ಜನತಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಿ. ಶ್ರೀನಿವಾಸ್, ಶಿಕ್ಷಕ ವೃಂದದ ಉದಯಕೃಷ್ಣ ಭಟ್,
ಗೀತಾಕುಮಾರಿ ಹಾಗೂ ಕುಸುಮಾವತಿ ಉಪಸ್ಥಿತರಿದ್ದರು. ಕನ್ನಡ ಅಧ್ಯಾಪಕ ಶಿವಕುಮಾರ ಸಾಯ ವಂದಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here