ಬಂಟ್ವಾಳ: ಶಿಕ್ಷಕರಿಗೆ ಹಮ್ಮಿಕೊಳ್ಳುವ ತರಬೇತಿಗಳಿಂದ ವಿದ್ಯಾರ್ಥಿಗಳ ಫಲಿತಾಂಶದ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರುವುದರಿಂದ ಈ ವಿಚಾರ ವನ್ನು ಶಿಕ್ಷಣ ಸಚಿವರ ಗಮನಕ್ಕೆ ತಂದು ಪರಿಹಾರದ ಕುರಿತು ಚರ್ಚೆ ನಡೆಸಲಾಗುವುದು,
ಮಕ್ಕಳಿಗೆ ಕೌನ್ಸಿಲ್ ನೀಡುವಾಗ ಪೋಷಕರನ್ನು ಗಣನೆಗೆ ತೆಗೆದುಕೊಳ್ಳುವಂತೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಶಾಲಾ ಮುಖ್ಯೋಪ್ಯಾದ್ಯಾಯರಿಗೆ ಸೂಚಿಸಿದರು.

ಇದರಿಂದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ , ಶಾಲಾ ಫಲಿತಾಂಶ ಜೊತೆಗೆ ಶಾಲಾ ಮತ್ತು ಪೋಷಕರ ಸಮನ್ವಯತೆ ಸಾಧಿಸಲು ಸಾಧ್ಯ ಎಂದರು.
ಅವರು ಬಿಸಿರೋಡಿನ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿಯಲ್ಲಿ ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶಕ್ಕಾಗಿ ಸರಕಾರಿ ಅನುದಾನಿತ ಹಾಗೂ ಖಾಸಗಿ ಶಾಲಾ ಮುಖ್ಯ ಶಿಕ್ಷರಜೊತೆಯಲ್ಲಿ ಶಾಸಕರು ಸಂವಾದ ಕಾರ್ಯಕ್ರಮನಡೆಸಿದರು.
ಎನ್.ಡಿ.ಆರ್.ಎಪ್.ಫಂಡಿನಿಂದ ಮಳೆಯಿಂದ ಹಾನಿಯಾದ ಶಾಲೆಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುತ್ತದೆ ಎಂದು ಅವರು ತಿಳಿಸಿದರು. ‌

ಫಲಿತಾಂಶದ ಜೊತೆಯಲ್ಲಿ ಮಕ್ಕಳ ಹಾಗೂ ಶಾಲೆಯ ಸರ್ವಾಂಗೀಣ ಅಭಿವೃದ್ಧಿ ಅಗಬೇಕಾಗಿದೆ, ಅದಕ್ಕೆ ಪೂರಕವಾದ ವಾತಾವರಣ ನಿರ್ಮಾಣಕ್ಕೆ ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಅವರು ಹೇಳಿದರು.

ಶಿಕ್ಷಕರ ಹೆಚ್ಚಿನ ಸಮಯವನ್ನು ಇಲಾಖಾ ಕೆಲಸಗಳಿಗೆ ಉಪಯೋಗಿಸುತ್ತಾರೆ, ಇದರಿಂದ ಶಿಕ್ಷಣದ ಕಡೆ ಗಮನ ಹರಿಸಲು ಅಸಾಧ್ಯ ವಾಗುತ್ತಿದೆ,
ಶಿಕ್ಷಣ ಇಲಾಖೆಯ ಸುತ್ತೋಲೆಗಳು ಖಾಸಗಿ ಹಾಗೂ ಸರಕಾರಿ ಶಾಲೆಗಳಿಗೆ ಅನ್ವಯಯಾಗುತ್ತದೆ, ಅದರೆ ಸುತ್ತೋಲೆಗಳನ್ನು ಸರಕಾರಿ ಶಾಲೆಗಳು ಮಾತ್ರ ಪಾಲಿಸುತ್ತಿದೆ, ಖಾಸಗಿ ಶಾಲೆಗಳು ಸುತ್ತೋಲೆಗಳು ಗಾಳಿಗೆ ತೂರಿ, ಕೇವಲ ಕಲಿಕೆಗೆ ಮಾತ್ರ ಒತ್ತು ನೀಡುತ್ತಿರುವುದರಿಂದ ಖಾಸಗಿ ಶಾಲೆಗಳಲ್ಲಿ ಉತ್ತಮ ಫಲಿತಾಂಶ ಬರುತ್ತದೆ, ಸರಕಾರಿ ಶಾಲೆಗಳಲ್ಲಿ ಫಲಿತಾಂಶದಲ್ಲಿ ಹಿನ್ನಡೆ ಅಗುತ್ತದೆ ಎಂದು ಗಂಭೀರ ಆರೋಪ ಮಾಡಿದ ಅಳಿಕೆ ಮುಖ್ಯ ಶಿಕ್ಷಕ ರಘು ಅವರು ಮುಂದಿನ ದಿನಗಳಲ್ಲಿ
ಮೀಟಿಂಗ್ ಗಳು ಕಡಿಮೆ ಮಾಡಿ ಎಂದು ಹೇಳಿದರು. ಶಿಕ್ಷಕರ ಕೊರತೆ ಇರುವ ಬಹುತೇಕ ಶಾಲೆಗಳಲ್ಲಿ ಅಶಿಸ್ತು ಇದೆ, ಫಲಿತಾಂಶಲ್ಲಿಯೂ ವೈಪರೀತ್ಯಗಳು ಕಂಡು ಬರುತ್ತಿದೆ ಎಂದು ಸಭೆಯಲ್ಲಿ ಶಿಕ್ಷಕರು ತಿಳಿಸಿದರು.
ಅತಿಥಿ ಶಿಕ್ಷಕರಿಗೆ ಸರಿಯಾಗಿ ವೇತನ ಪಾವತಿಯಾಗಿಲ್ಲ ಎಂದು ಸರಕಾರಿ ನೌಕರರ ಸಂಘದ ಅಧ್ಯಕ್ಷ ಉಮಾನಾಥ ರೈ ಮೇರಾವು ಆರೋಪ ವ್ಯಕ್ತಪಡಿಸಿದರು.
ಕಂಪ್ಯೂಟರ್ ಶಿಕ್ಷಣಕ್ಕಾಗಿ ಅನೇಕ ಶಾಲೆಗಳಲ್ಲಿ ಕಂಪ್ಯೂಟರ್ ಗಳ ಕೊರತೆ ಇದೆ ಎಂದು ಶಾಸಕರ ಗಮನಕ್ಕೆ ಶಿಕ್ಷಕರು ತಂದರು.
ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ , ಕ್ಷೇತ್ರ ಸಂಪನ್ಮೂಲ ಸಮಯನ್ವಧಿಕಾರಿ ರಾಧಾಕೃಷ್ಣ ಭಟ್ ಹಾಗೂ ಶಾಲಾ ಮುಖ್ಯಶಿಕ್ಷಕರುಗಳು ಹಾಜರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here