

ಬಂಟ್ವಾಳ: ಮಾಜಿ ತಾ.ಪಂ.ಸದಸ್ಯ ರೋರ್ವರ
ಮನೆಯಲ್ಲಿ ಹಾಡುಹಗಲೇ ಲಕ್ಷಾಂತರ ರೂ ಮೌಲ್ಯದ ನಗ ನಗದು ಕಳವು ಮಾಡಿದ ಘಟನೆ ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕೆಳಗಿನ ತುಂಬೆಯಲ್ಲಿ ನಡೆದಿದೆ.
ಕೆಳಗಿನ ತುಂಬೆ ನಿವಾಸಿ ಮಾಜಿ ತಾ.ಪಂ.ಸದಸ್ಯ, ಬಿಜೆಪಿ ಸಕ್ರೀಯ ಕಾರ್ಯ ಕರ್ತ ಸೋಮಪ್ಪ ಕೋಟ್ಯಾನ್
ಅವರ ಮನೆಯಲ್ಲಿ ಹಾಡುಹಗಲು ಮನೆಯಲ್ಲಿ ಯಾರು ಇಲ್ಲದ ವೇಳೆ ಹಿಂಬದಿಯ ಬಾಗಿಲು ಮುರಿದು ಮನೆಯೊಳಗೆ ಪ್ರವೇಶ ಮಾಡಿ ಕಳವು ನಡೆಸಿದ್ದಾರೆ .
12.92 600 ಲಕ್ಷ ರೂ ಬೆಲೆ ಬಾಳುವ ಬಂಗಾರ, 15 ಸಾವಿರ ನಗದು ಕಳವು ಮಾಡಿದ್ದಾರೆ.
ಗೊದ್ರೆಜ್ ನಲ್ಲಿಟ್ಟಿದ್ದ ಲಕ್ಷಾಂತರ ರೂ ಬೆಲೆ ಬಾಳುವ
398 ಗ್ರಾಂ. ಚಿನ್ನ.100 ಬೆಳ್ಳಿಯನ್ನು ಹಾಗೂ ನಗದು ಹಣವನ್ನು ಮಧ್ಯಾಹ್ನ. 11.30 ರಿಂದ 1 ಗಂಟೆಯ ಮಧ್ಯೆ ಕಳವು ಮಾಡಿರಬಹುದು ಎಂದು ಮನೆಯವರು ಹೇಳುತ್ತಿದ್ದಾರೆ.
ಮನೆಮಂದಿ ಎಲ್ಲರೂ ಕಾರ್ಯಕ್ರಮ ಕ್ಕೆ ಎಂದು ಅಲ್ಲಿಪಾದೆಗೆ
ತೆರಳಿದ್ದರು. ಸೋಮಪ್ಪ ಕೋಟ್ಯಾನ್ ಅವರ
ಸೊಸೆ ಕುಟುಂಬ ದ ನಾಗ ತಂಬಿಲ ಕಾರ್ಯಕ್ರಮಕ್ಕೆ ಹೋಗಿದ್ದರು.ಮಧ್ಯಾಹ್ನ ಕಾರ್ಯ ಕ್ರಮ ಮುಗಿಸಿ ಬರುವಾಗ
ಹಿಂಬದಿಯ ಬಾಗಿಲಿನ ಚಿಲಕಒಪನ್ ಮಾಡಿದ್ದು ಕಂಡು ಒಳಗೆ ಹೋಗಿ ನೋಡುವಾಗ ಕಳವು ನಡೆದಿದ್ದು ಗಮನಕ್ಕೆ ಬಂತು ಬಳಿಕ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಅಗಮಿಸಿದ್ದಾರೆ.
ಎ.ಎಸ್.ಪಿ.ಸೈದುಲು ಅಡಾವತ್ , ವೃತ್ತ ನಿರೀಕ್ಷಕ ಟಿ. ಡಿ.ನಾಗರಾಜ್, ಎಸ್.ಐ.ಪ್ರಸನ್ನ ಬೇಟಿ ನೀಡಿದರು.







