ಬಂಟ್ವಾಳ: ಬಂಟ್ವಾಳ ತಾಲೂಕಿನ ತಲಪಾಡಿ ಸಮೀಪದ ನೇತ್ರಾವತಿ ನದಿಯಲ್ಲಿ ಅಪರಿಚಿತ ಮೃತದೇಹವೊಂದು ರವಿವಾರ ಪತ್ತೆಯಾಗಿದೆ.
ಅಪರಿಚಿತ ಗಂಡಸಿನ ಮೃತ ದೇಹಕ್ಕೆ ಸುಮಾರು 35 ವರ್ಷ ವಯಸ್ಸಾಗಿರಬಹುದೆಂದು ಅಂದಾಜಿಸಲಾಗಿದೆ.

ತುಂಬೆ ಡ್ಯಾಂ ಸಮೀಪದ ತಲಪಾಡಿಯ ನೇತ್ರಾವತಿ ನದಿಯಲ್ಲಿ ಕಾರ್ಯಾಚರಿಸುತ್ತಿರುವ ಮರಳು ಡ್ರೆಜ್ಜಿಂಗ್ ಯಂತ್ರದಲ್ಲಿ ಮೃತದೇಹ ಪತ್ತೆಯಾಗಿದೆ. ಇಲ್ಲಿನ ಕೆಲಸಗಾರರು ಇಂದು ಬೆಳಿಗ್ಗೆ ಮರಳು ಡ್ರೆಜ್ಜಿಂಗ್ ಕಾರ್ಯದಲ್ಲಿ ತೊಡಗಿರುವಾಗ ಮಿಷನ್ ಸಮೀಪ ಮೃತದೇಹ ಕಂಡು ಬಂದಿದೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಬಂಟ್ವಾಳ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಸ್ಥಳೀಯರಾದ ಈಜುಗಾರರಾದ ಶಾಹುಲ್ ಹಮೀದ್, ಮುಹಮ್ಮದ್ ಅಲಿ, ನವಾಝ್, ಪುತ್ತುಮೊನು, ಲತೀಫ್ ಬಿ.ಸಿ., ಕಮರುದ್ದೀನ್, ಪೊಲೀಸ್ ಸಿಬ್ಬಂದಿ‌ ಕೇದರ್ ಅವರು ಮೇತದೇಹವನ್ನು ಮೇಲೆತ್ತಲ್ಲಿ ಸಹಕರಿಸಿದರು.
ಇದು ಆತ್ಮಹತ್ಯೆಯೋ ಅಥವಾ ಆಕಸ್ಮಿಕ ಸಾವೋ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬರಬೇಕಾಗಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here