

ಮಾಣಿ: ಶ್ರೀಮದ್ ಭಾಗವತ ಸಪ್ತಾಹದ ನಾಲ್ಕನೇ ದಿನದ ಪ್ರಧಾನ ಅವತಾರ ಕೃಷ್ಣಾವತಾರದ ಅಂಗವಾಗಿ ಶ್ರೀ ಕೃಷ್ಣ ,ರಾಧೆಯರ ವೇಷಭೂಷಣ ದಲ್ಲಿ ಪುಟ್ಟ ಮಕ್ಕಳನ್ನು ಕೃಷ್ಣನ ಬಾಲಲೀಲೆಗಳನ್ನು ಬಿಂಬಿಸುವ ಮೊಸರು ಕುಡಿಕೆ ಹಬ್ಬದ ಚಿತ್ರಣವನ್ನು ಭಾಗವತ ಸಪ್ತಾಹ ದಲ್ಲಿ ಆಯೋಜಿಸಲಾಗಿತ್ತು.
ಮುದ್ದು ಮುದ್ದಾದ ಪುಟ್ಟ ಮಕ್ಕಳ ನೃತ್ಯ ಎಲ್ಲರ ಮನಸ್ಸನ್ನು ಗೆದ್ದಿತ್ತು ಮಾತ್ರವಲ್ಲದೆ ಹಿರಿಯರು ಮಕ್ಕಳು ಎನ್ನುವ ಭೇದ ಭಾವ ಇಲ್ಲದೆ ಕೃಷ್ಣ ದೇವರ ಭಜನೆ ಹಾಡಿ ದೇವರ ಕೃಪೆಗೆ ಪಾತ್ರರಾದರು.ಶ್ರೀ ಮದ್ ಭಾಗವತ ಸಪ್ತಾಹ ದಲ್ಲಿ ಪಾಲ್ಗೊಂಡ ಭಕ್ತಾದಿಗಳಿಗೆ ಮೊಸರು ಕುಡಿಕೆ ಉತ್ಸವದ ನೆನಪಿಸುವಂತಿತ್ತು.
ಮತ್ತೊಂದು ಈ ದಿನದ ವಿಶೇಷತೆ ಪ್ರತಿ ವರ್ಷ ಮಾಣಿಯ ಶ್ರೀ ಕೃಷ್ಣ ಜನ್ಮಾಷ್ಟಮಿ ಗೆ ತಪ್ಪದೇ ಭಾಗವಹಿಸುವ ಮಾಜಿ ಸಚಿವ /ಮಾಜಿ ಶಾಸಕ ಬೆಳ್ಳಿಪ್ಪಾಡಿ ರಮಾನಾಥ ರೈಯವರು ಭಾಗವತ ಸಪ್ತಾಹ ದಲ್ಲಿ ಭಾಗವಹಿಸಿದ್ದು. ಮೊಸರು ಕುಡಿಕೆ ಹಬ್ಬ ನೆನಪಿಸುವಂತಿತ್ತು
ಮಾಜಿ ಸಚಿವ ಬೆಳ್ಳಿಪ್ಪಾಡಿ ರಮಾನಾಥ ರೈಯವರು ಭಾಗವತ ಸಪ್ತಾಹ ದಲ್ಲಿ ಭಾಗವಹಿಸಿದರು.







