

ವಿಟ್ಲ: ವಿಟ್ಲ ನಗರ ಬಿಜೆಪಿ ಮತ್ತು ಭಾರತೀಯ ಅಂಚೆ ಇಲಾಖೆ ಸಹಯೋಗದೊಂದಿಗೆ ನ.18 ರಿಂದ 20 ರವರೆಗೆ ವಿಟ್ಲ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಟ್ಟಡದಲ್ಲಿ ಆಧಾರ್ ಕಾರ್ಡು ಹೊಸ ಅರ್ಜಿ ಮತ್ತು ತಿದ್ದುಪಡಿಗಳ ಅದಾಲತ್ ನಡೆಯಲಿದೆ. ವಾಸ್ತವ್ಯದ ದಾಖಲೆ, ಪಡಿತರ ಚೀಟಿ, ತಿದ್ದುಪಡಿಗೆ ಅವಶ್ಯ ದಾಖಲೆಯನ್ನು ಹಾಜರುಪಡಿಸಿ, ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು ಎಂದು ವಿಟ್ಲ ನಗರ ಬಿಜೆಪಿ ಪ್ರಕಟನೆ ತಿಳಿಸಿದೆ.







