

ಬಂಟ್ವಾಳ: ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನ ಸಜೀಪ ಮೂಡ ಕ್ಷೇತ್ರದಲ್ಲಿ ವರ್ಷಾವಧಿ ಕೋಲವು ನ.22ನೇ ಶುಕ್ರವಾರ ಮೊದಲ್ಗೊಂಡು ನ.24ನೇ ಆದಿತ್ಯವಾರ ತನಕ ನಡೆಯಿತು.
ನ.22ರ ಶುಕ್ರವಾರ ಸಂಜೆ 7 ಗಂಟೆಗೆ ದೀಪ ಪ್ರಜ್ವಲನೆ, ಸಂಜೆ 7-05ಕ್ಕೆ ಶೀತಲ್ ಕುಲಾಲ್ ಮಂಚಿ ಇವರಿಂದ ಭರತನಾಟ್ಯ , ಧನ್ಯ ಕುಲಾಲ್ ಇವರಿಂದ ನೃತ್ಯ ಕಾರ್ಯಕ್ರಮ ಹಾಗೂ ರಾತ್ರಿ 7-15ರಿಂದ ರಾಕ್ ಸ್ಟಾರ್ ಮಾರ್ನಬೈಲು ಇಲ್ಲಿಯ ಮಕ್ಕಳಿಂದ ಡ್ಯಾನ್ಸ್ ಕಾರ್ಯಕ್ರಮ ಮತ್ತು ರಾತ್ರಿ 8ರಿಂದ “ಜವನೇರ್ ಪಣೋಲಿಬೈಲು” ಪ್ರಸ್ತುತ ಪಡಿಸುವ ತುಳು ಹಾಸ್ಯಮಯ ನಾಟಕ ಪ್ರದರ್ಶನ ನಡೆಯಿತು.
ನ.23ನೇ ಶನಿವಾರ ಸಂಜೆ ಗಂಟೆ 5.25ಕ್ಕೆ ಕೊಪ್ಪರಿಗೆ ಮುಹೂರ್ತ, ಸಂಜೆ 5.30ರಿಂದ ಶ್ರೀ ಕೃಷ್ಣ ಭಜನಾ ಮಂದಿರ ಇವರಿಂದ “ಕುಣಿತ ಭಜನೆ” ಸಂಜೆ 6.30ರಿಂದ ಡಾ.ಕೃಷ್ಣ ಪ್ರಸಾದ್ ಉಪ್ಪಿನಂಗಡಿ ಇವರಿಂದ “ಸ್ಯಾಕ್ಸೋಫೋನ್” ರಾತ್ರಿ 7.30ರಿಂದ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಬಯಲಾಟ “ಶ್ರೀನಿವಾಸ ಕಲ್ಯಾಣ” ಭಾಗವತರು- ಶತೀಶ್ ಶೆಟ್ಟಿ ಪಟ್ಲ, ರವಿಚಂದ್ರ ಕನ್ನಡಿಕಟ್ಟೆ, ಗಿರೀಶ್ ರೈ ಕಕ್ಕೆಪದವು. ಚೆಂಡೆ ಮದ್ದಲೆ- ಪದ್ಮನಾಭ ಉಪದ್ಯಾಯ, ಗುರುಪ್ರಸಾದ್ ಬೋಳಿಯಡ್ಕ. ಯಕ್ಷತಾಳ- ರಾಜೇಂದ್ರ ಕೃಷ್ಣ ಇವರಿಂದ ನಡೆಯಿತು.








