ವಿಟ್ಲ: ಮಾಣಿಲ ಕುಕ್ಕಾಜೆ ಶ್ರೀ ಆಂಜನೇಯ ಕಾಳಿಕಾಂಬ ಕ್ಷೇತ್ರದ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ 2021 ಕ್ಕೆ ನಡೆಯಲಿದ್ದು, ಅದರ ಯಶಸ್ಸಿಗಾಗಿ ನ.17 ರಂದು ಶ್ರೀ ಕ್ಷೇತ್ರದಿಂದ ಪೊಳಲಿ ಶ್ರೀ ರಾಜರಾಜೇಶ್ವರೀ ಕ್ಷೇತ್ರಕ್ಕೆ ಪಾದಯಾತ್ರೆ ನಡೆಯಲಿದೆ. ಪ್ರಾತ: ಕಾಳದಿಂದ ಪಾದಯಾತ್ರೆ ಹೊರಡಲಿದ್ದು, ವಿಟ್ಲ ಸೀಮೆಯ ಪ್ರಧಾನ ದೇವಸ್ಥಾನವಾದ ಶ್ರೀ ಉಳ್ಳಾಲ್ತಿ ಪಂಚಲಿಂಗೇಶ್ವರ ದೇಗುಲ ಸಂದರ್ಶಿಸಿ ಪಾದಯಾತ್ರೆ ಮುಂದೆ ಸಾಗಲಿದ್ದು, ಭಕ್ತಾದಿಗಳು ಈ ಪಾದಯಾತ್ರೆಯಲ್ಲಿ ಪಾಲ್ಗೊಂಡು ಸಹಕರಿಸಬೇಕೆಂದು ಶ್ರೀ ಕ್ಷೇತ್ರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here