ಮಾಣಿ: ಶ್ರೀಮದ್ ಭಾಗವತ ಎಂದರೆ ಕೇವಲ ಪಾರಾಯಣ ಮತ್ತು ಪ್ರವಚನ ಅಲ್ಲ.ಅದರಲ್ಲಿ ಭಾಗವತ ದ ಕಥೆ ,ಸಾರವನ್ನು ಯನ್ನು ಯಕ್ಷಗಾನ ದ ಮೂಲಕ ಕೂಡ ಜನರಿಗೆ ಅರ್ಥ ಮಾಡಿಸಬಹುದು ಎಂಬ ವಿಶೇಷ ಪ್ರಯೋಗ ಮಾಣಿಯ ಭಾಗವತ ಸಪ್ತಾಹ ದಲ್ಲಿ ಜರುಗಿತು.

 

 

ಲೋಕ ಕಲ್ಯಾರ್ಥವಾಗಿ ಸಮಸ್ತ ದೋಷ ಪರಿಹಾರಾರ್ಥವಾಗಿ ಮಾಣಿ ಗುತ್ತು ಚಾವಡಿ ಯಲ್ಲಿ ಜರಗುತ್ತಿರುವ ಶ್ರೀಮದ್ ಭಾಗವತ ಸಪ್ತಾಹದ 3ನೇ ದಿನದಂದು ಭರತ ಚರಿತೆ, ಭೂಗೋಳ ವರ್ಣನೆ, ಅಜಮಿಳೋಪಾಖ್ಯಾನ, ವೃತ್ರಾಸುರಚರಿತೆ, ಪ್ರಹ್ಲಾದ ಚರಿತ್ರೆ ಪಾರಾಯಣ ಮತ್ತು ನರಸಿಂಹಾವತಾರದ ಪಾರಾಯಣ ಮತ್ತು ಪ್ರವಚನ ಜರುಗಿತ್ತು. ಈ ನಡುವೆ ಸುಮಾರು ಅರ್ಧ ಘಂಟೆಗಳ ಕಾಲ ಜರಗಿದ ಯಕ್ಷಗಾನ ಕಿರುಕಾರ್ಯಕ್ರಮ ನೆರೆದ ಎಲ್ಲಾ ಭಕ್ತಾದಿಗಳಿಗೆ ಉತ್ತಮ ಕಲಾ ರಸದೌತಣ ಪ್ರಾಪ್ತವಾಯಿತು. ಈ ಭಾಗವತದಲ್ಲಿ ಬರುವ ಪ್ರಹ್ಲಾದನ ಹರಿ ಭಕ್ತಿಯನ್ನು ಬಿಂಬಿಸುವ ಯಕ್ಷಗಾನ ಅವತರಣಿಕೆ ಯನ್ನು ಮಾಣಿಯ ಯಕ್ಷಗಾನ ಕಲಾವಿದ ಸತೀಶ್ ಆಚಾರ್ಯ ಮತ್ತು ಬಳಗದವರು ಕಲಾ ಸೇವೆಯನ್ನು ಶ್ರೀ ಭಾಗವತ ಕೃಷ್ಣ ದೇವರಿಗೆ ಅರ್ಪಿಸುವ ಮುಖೇನ ಕೃತಾರ್ಥರಾದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here