Wednesday, October 18, 2023

ಬೈಕ್ ಕಳವು

Must read

ಬಂಟ್ವಾಳ: ಗ್ಯಾರೇಜೊಂದರ ಬಳಿಯಲ್ಲಿ ನಿಲ್ಲಿಸಿ ಹೋಗಿದ್ದ ಬೈಕೊಂದು ಕಳವು ಅದ ಘಟನೆ ಬಂಟ್ವಾಳ ನಗರ ಪೋಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ಪುರಸಭಾ ವ್ಯಾಪ್ತಿಯ ಜಕ್ರಿಬೆಟ್ಟು ಎಂಬಲ್ಲಿ ನಡೆದಿದೆ.
ಜಕ್ರಿಬೆಟ್ಟು ನಿವಾಸಿ ಹರೀಶ್ ಎಂಬವರ ಯಮಹಾ ಕಂಪನಿಯ ಬೈಕ್ ಕಳವಾಗಿದೆ ಎಂದು ಅವರು ಠಾಣೆಯ ಲ್ಲಿ ದೂರು ನೀಡಿದ್ದಾರೆ.

ಬಂಟ್ವಾಳ ಜಕ್ರಿಬೆಟ್ಟು ಅಪೂರ್ವ ಗ್ಯಾರೇಜ್ ಸಮೀಪ ನ.13 ರಂದು ರಾತ್ರಿ ವೇಳೆ ನಿಲ್ಲಿಸಿ ಅವರು ಮನೆಗೆ ಹೋಗಿದ್ದರು.ಮರುದಿನ ನ.14 ರಂದು ಬೆಳಿಗ್ಗೆ ಬಂದು ನೋಡುವಾಗ ನಿಲ್ಲಿಸಿದ ಬೈಕ್ ಇಲ್ಲದೆ ಇರುವುದು ಕಂಡುಬಂತು.
ಈ ಬಗ್ಗೆ ನ.15 ರಂದು ಶುಕ್ರವಾರ ಬಂಟ್ವಾಳ ನಗರ ಠಾಣೆಯಲ್ಲಿ ದೂರು ನೀಡಿದ್ದು , ಸ್ಥಳ ಕ್ಕೆ ಪೋಲೀಸರು ಬೇಟಿ ನೀಡಿದ್ದಾರೆ.

More articles

Latest article