ಬಂಟ್ವಾಳ: ಸಾವಿರಾರು ರೂ ನಗದು ಸಹಿತ ವಿವಿಧ ದಾಖಲೆಗಳನ್ನೊಳಗೊಂಡ ಮಹಿಳೆಯೋರ್ವರ ಪರ್ಸ್ ಒಂದು ಕಳೆದುಹೋದ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಂಗಳೂರು ಕಾಟಿಪಳ್ಳ ನಿವಾಸಿ ವಿನೋದ್ ರಾಜ್ ಅವರ ಪತ್ನಿ ಶೃತಿ ಅವರ 40000ಸಾವಿರ ರೂ ನಗದು ಹಾಗೂ ಬೈಕ್ ನ ಅರ್.ಸಿ.ಡ್ರೈವಿಂಗ್ ಲೈಸೆನ್ಸ್ ಮತ್ತು ಎ.ಟಿ.ಎಮ್ ಕಾರ್ಡ್ ಗಳಿದ್ದ ಪರ್ಸ್ ಕಳೆದುಹೋಗಿದೆ ಎಂದು ಅವರು ದೂರು ನೀಡಿದ್ದಾರೆ.
ಬಿಸಿರೋಡಿನಿಂದ ಬೈಕಿನಲ್ಲಿ ಕಲ್ಲಡ್ಕ ಕ್ಕೆ ತೆರಳುವ ವೇಳೆ ಮಾರ್ಗಮಧ್ಯದಲ್ಲಿ ಕಳೆದುಹೋಗಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ.
ಬಿಸಿರೋಡಿನಿಂದ ಕಲ್ಲಡ್ಕ ಕ್ಕೆ ಕಾರ್ಯಕ್ರಮ ವೊಂದಕ್ಕೆ ತೆರಳಿದ್ದ ಅವರು ಕಲ್ಲಡ್ಕ ಹೋಟೆಲ್ ಒಂದರಲ್ಲಿ ಚಾ ಕುಡಿಯಲು ಹೋದಾಗ ಪರ್ಸ್ ಕಳೆದುಹೋಗಿರುವುದು ಗಮನಕ್ಕೆ ಬಂದಿತು. ಬಳಿಕ ಅವರು ಬಂಟ್ವಾಳ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.
ಕಳೆದು ಹೋಗಿರುವ ಪರ್ಸ್ ಯಾರಿಗಾದರೂ ಸಿಕ್ಕಿದರೆ ಬಂಟ್ವಾಳ ನಗರ ಪೋಲೀಸ್ ಠಾಣೆ ಅಥವಾ ಶೃತಿ ಅವರ ಪತಿ ವಿನೋದ್ ರಾಜ್ ಅವರ ಮೊಬೈಲ್‌ ನಂ. 9886830515 ಗೆ ಪೋನ್ ಮಾಡುವಂತೆ ವಿನಂತಿ ಮಾಡಿರುವ ಅವರು ನೀಡಿದವರಿಗೆ ಸೂಕ್ತವಾದ ಬಹುಮಾನವನ್ನು ನೀಡುವ ಭರವಸೆ ನೀಡಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here