ಬಂಟ್ವಾಳ: ಪಂಜಿಕಲ್ಲು ಗ್ರಾಮ ಪಂಚಾಯತ್ ತೆರವಾದ ಸದಸ್ಯ ಸ್ಥಾನಕ್ಕೆ ನ.12ರಂದು ಮಂಗಳವಾರ ದಡ್ಡಲಕಾಡು ಶಾಲೆಯಲ್ಲಿ ಮತದಾನ ನಡೆದಿದ್ದು ಪ್ರವೀಣ್ ಡಿ. ಸಪಲ್ಯ ಹಾಗೂ ಸುರೇಶ್ ಜೆ. ಪೂಜಾರಿ ಕಣದಲ್ಲಿ ಇದ್ದರು ಚುನಾವಣಾಧಿಕಾರಿಯಾಗಿ ಮಹೇಶ್ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು ಬಂಟ್ವಾಳ, ಸಹಾಯಕ ಚುಣಾವಣಾಧಿಕಾರಿಯಾಗಿ ಮುಖ್ಯ ಶಿಕ್ಷಕ ಕಮಾಲಾಕ್ಷ ಇದ್ದರು ಇಂದು ಬಿ ಸಿ ರೋಡು ಮಿನಿವಿಧಾನ ಸೌದಧ ಚುನಾವಣಾ ಶಾಖೆಯಲ್ಲಿ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್ ಆರ್ ರವರ ನೇತೃತ್ವದಲ್ಲಿ ಮತ ಎಣಿಕೆ ಕಾರ್ಯ ನಡೆಯಿತು.

ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸುರೇಶ್ ಪೂಜಾರಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಡಿ. ಪ್ರವೀಣ್ ವಿರುದ್ದ 44 ಮತಗಳ ಅಂತರದ ಗೆಲುವು ಸಾಧಿಸಿದರು.
ಈ ಸಂದರ್ಭದಲ್ಲಿ ಆಹಾರ ಶಿರಸ್ತೇದಾರ್ ಶ್ರೀನಿವಾಸ್ ಚುನಾವಣಾ ಪ್ರಭಾರ ಉಪತಹಶೀಲ್ದಾರ್ ಸೀತಾರಾಮ, ಪ್ರಥಮ ದರ್ಜೆ ಸಹಾಯಕ ರಾಜ್ ಕುಮಾರ್ ವಿದ್ಯಾ ಜೆ ಮೋರೆ, ಶ್ವೇತ ಚುಣಾವಣಾ ಪ್ರಕ್ರಿಯೆಯಲ್ಲಿ ಹಾಜರಿದ್ದು ಎಣಿಕೆ ಕಾರ್ಯದಲ್ಲಿ ನೇರವಾದರು. ಕಿರಣ್ ತೋಮಸ್. ಚಂದು ಸಹಕರಿಸಿದರು.

ಒಟ್ಟು ಚಲಾವಣೆಯಾದ ಮತಗಳು: 776
ಸುರೇಶ್ ಜೆ ಪೂಜಾರಿ: 405
ಡಿ. ಪ್ರವೀಣ್: 361
ತಿರಸ್ಕ್ರತ ಮತಗಳು: 10

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here