

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ 75 ರ ಮಂಗಳೂರು ಬೆಂಗಳೂರು ಮಧ್ಯೆ ಬಿಸಿರೋಡು ಬಸ್ ನಿಲ್ದಾಣದಲ್ಲಿ ರಸ್ತೆಯು ಹಾಳಾಗಿದ್ದು ಡಾಮರು ಎದ್ದು ಹೋಗಿ ನಿತ್ಯ ದೂಳಿನ ಸಮಸ್ಯೆ ಯಿಂದ ಪ್ರಯಾಣಿಕರು ತೊಂದರೆ ಪಡುತ್ತಿದ್ದಾರೆ.
ದೂಳಿನ ಸಮಸ್ಯೆಯಿಂದ ಪಾರಾಗಲು ಬಿಸಿರೋಡಿನ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ ಏಜೆಂಟ್ ರುಗಳು ನೀರು ಹಾಯಿಸಿ ಇಲಾಖೆಯ ಗಮನ ಸೆಳೆಯುವ ಪ್ರಯತ್ನ ನಡೆಸಿದರು.
ಕಳೆದ ಕೆಲ ದಿನಗಳಿಂದ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಸಂಬಂಧಿಸಿದ ರಸ್ತೆಯ ಡಾಮರು ಎದ್ದು ಹೋಗಿ ದೂಳಿನ ಸಮಸ್ಯೆ ಯಿಂದ ಪ್ರಯಾಣಿಕರು ಬಳಲುತ್ತಿದ್ದಾರೆ. ಅದರೂ ಇಲಾಖೆ ಯಾವುದೇ ರೀತಿಯ ಸ್ಪಂದನೆ ನೀಡುತ್ತಿಲ್ಲ ಎಂದು ಸ್ಥಳೀಯ ರು ಆರೋಪಿಸುತ್ತಿದ್ದಾರೆ.
ಬಸ್ ಗಾಗಿ ಕಾಯುವ ಪ್ರಯಾಣಿಕರಂತೂ ದೂಳಿನ ಸಮಸ್ಯೆಯಿಂದ ಹೈರಾಣಾಗಿದ್ದಾರೆ.
ಅಂಗಡಿ ಹೋಟೆಲ್ ಗಳು ದೂಳಿನ ಸಮಸ್ಯೆ ಯಿಂದ ವ್ಯಾಪಾರ ವಹಿವಾಟು ಕಡಿಮೆ ಅಗಿದೆ ಎಂದು ಹೇಳುತ್ತಿದ್ದಾರೆ.ಇನ್ನೊಂದು ಕಡೆಯಿಂದ ವಿಪರೀತ ದೂಳಿನಿಂದಾಗಿ ಸೊಂಕು ರೋಗ ಬರುತ್ತದೋ ಎಂಬ ಹೆದರಿಕೆಯಲ್ಲಿ ಇಲ್ಲಿನ ನಿವಾಸಿಗಳು ಸಂಬಂಧಿಸಿದ ಇಲಾಖೆ ಗೆ ಹಿಡಿಶಾಪ ಹಾಕುತ್ತಿದ್ದಾರೆ.
ಅಂತೂ ಹೆದ್ದಾರಿ ಯವರನ್ನು ಯಾರು ಹೇಳುವವರು ಕೇಳುವವರು ಇಲ್ಲವೇ ಎಂಬ ಪ್ರಶ್ನೆ ಉದ್ಭವಿಸುವ ಮಟ್ಟಕ್ಕೆ ಇವರ ಕಾರ್ಯವೈಖರಿ ಇದೆ.ಏನೇ ಅಗಲಿ ಸಾರ್ವಜನಿಕ ರು ದೂಳಿನ ಸಮಸ್ಯೆ ಯಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು ಹೆದ್ದಾರಿ ಇಲಾಖೆ ಬಿಸಿರೋಡಿನ ಹೃದಯಭಾಗದಲ್ಲಿಯಾದರೂ ರಸ್ತೆಗೆ ಡಾಮರೀಕರಣ ಮಾಎಬೇಕಾಗಿದೆ ಎಂಬುದು ಸಾರ್ವಜನಿಕರ ಆಗ್ರಹ







