ದಕ್ಷ ಪ್ರಾಮಾಣಿಕ ಪೋಲೀಸ್ ಸಬ್ ಇನ್ಸ್ ಪೆಕ್ಟರ್ ಚಂದ್ರಶೇಖರ್ ಅವರು ಬಂಟ್ವಾಳ ನಗರ ಪೋಲೀಸ್ ಠಾಣೆಯಿಂದ ನ. 11ರಂದುಸೋಮವಾರ ರಾತ್ರಿ ರಿಲೀವ್ ಗೊಂಡು ಮಡಿಕೇರಿ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ನ.12 ಇಂದು ವರದಿಮಾಡಿದ್ದಾರೆ.‌

ಕಳೆದ ತಿಂಗಳಲ್ಲಿ ದಕ್ಷಿಣ ವಲಯದ ಮೈಸೂರು ವೃತ್ತದ ಮಡಿಕೇರಿ ಗ್ರಾಮಾಂತರ ಪೋಲೀಸ್ ಠಾಣೆಗೆ ವರ್ಗಾವಣೆ ಗೊಂಡಿದ್ದ ಎಸ್.ಐ.ಚಂದ್ರಶೇಖರ್ ಅವರು ಆಯೋಧ್ಯೆ ತೀರ್ಪು ಹಾಗೂ ಈದ್ ಹಬ್ಬ, ಮತ್ತು ಟಿಪ್ಪು ಜಯಂತಿ ಕಾರ್ಯಕ್ರಮ ದ ಹಿನ್ನೆಲೆಯಲ್ಲಿ ಮೇಲಾಧಿಕಾರಿಗಳ ಅದೇಶದಂತೆ ಸೋಮವಾರ ರಾತ್ರಿಯವರೆಗೆ ನಗರ ಪೋಲೀಸ್ ಠಾಣೆಯಲ್ಲಿ ಕೆಲಸ ನಿರ್ವಹಿಸಿದ್ದರು.
ಎರಡು ವರ್ಷಗಳ ಹಿಂದೆ ಕೋಮು ಗಲಭೆಯಿಂದ ಹೊತ್ತಿಉರಿಯುತ್ತಿದ್ದ ಬಂಟ್ವಾಳಕ್ಕೆ ಬಂದು ಶಾಂತಿ ನೆಲೆಸುವಂತೆ ಮಾಡಿದ್ದು ಎಸ್.ಐ.ಚಂದ್ರಶೇಖರ್ ಅವರು.ಆಶ್ರಫ್ ಕಲಾಯಿ , ಶರತ್ ಮಡಿವಾಳ ಕೊಲೆ ಪ್ರಕರಣ, ಕಲ್ಲಡ್ಕ ದಲ್ಲಿ ಗುಂಪು ಘರ್ಷಣೆ ಸೇರಿದಂತೆ ಬಂಟ್ವಾಳದಲ್ಲಿ ಅಶಾಂತಿ ತಲೆದೋರಿತ್ತು.
ಅಂತಹ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ಸುಳ್ಯ ಪೋಲೀಸ್ ಠಾಣೆಯಿಂದ ಬಂಟ್ವಾಳ ಸೂಕ್ಷ್ಮ ಪ್ರದೇಶಕ್ಕೆ ಬಂದು ಸಹಜ ಸ್ಥಿತಿಗೆ ತರುವ ಪ್ರಯತ್ನ ಫಲನೀಡಿದೆ, ಮೇಲಾಧಿಕಾರಿಗಳಿಂದ ಶಹಬ್ಬಾಸ್ ಗಿರಿ ಗಿಟ್ಟಿಸಿಕೊಂಡಿದ್ದರು.ನಿಜಕ್ಕೂ ಇವರ ಅವಧಿಯಲ್ಲಿ ಯಾವುದೇ ಗಲಾಟೆಯಿಲ್ಲದೆ ಶಾಂತಿ ನೆಲೆಸಿತ್ತು ಅನ್ನುವುದಕ್ಕೆ ಖುಷಿ ಅಗುತ್ತಿದೆ.
2017 ರ ಅ. 16. ರಂದು ಸುಳ್ಯ ದಿಂದ ವರ್ಗಾವಣೆ ಗೊಂಡು ಬಂಟ್ವಾಳ ‌ನಗರ ಪೋಲೀಸ್ ಠಾಣೆಗೆ ಎಸ್.ಐ.ಚಂದ್ರಶೇಖರ್ ಬಂದು ಜಾರ್ಜ್ ತೆಗೆದುಕೊಂಡ ಬಳಿಕ ನ.11ರ ನಿನ್ನೆಯವರಗೆ ಎರಡು ವರ್ಷಗಳ ಕಾಲ ಕೆಲಸ ನಿರ್ವಹಿಸಿದ ಅವರ ಅವಧಿಯಲ್ಲಿ ಯಾವುದೇ ಕಪ್ಪು ಚುಕ್ಕೆಯಿಲ್ಲದೆ ವರ್ಗಾವಣೆ ಗೊಂಡಿದ್ದಾರೆ .
ಎಂ.ಎಲ್.ಎ.ಎಂ.ಪಿ.ಚುನಾವಣೆ, ಪುರಸಭೆ ಶಾಂತಿಯುತ ಚುನಾವಣೆ, ಇಂದಿರಾ ಕ್ಯಾಂಟೀನ್ ನ ಕಾಂಪೌಂಡ್ ಗೋಡೆಯ ವಿವಾದ ವನ್ನು ತಾರಕ್ಕಕ್ಕೇರದ ರೀತಿಯಲ್ಲಿ ಮನವೊಲಿಸಿ ಪರಿಹಾರ ಮಾಡಿದ ವಿಚಾರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.
ಬೆಳ್ತಂಗಡಿ ಯಿಂದ ಬಂಟ್ವಾಳ ಕಡೆಗೆ ಅಕ್ರಮವಾಗಿ ದನಗಳನ್ನು ಸಾಗಾಟ ಮಾಡುವ ವೇಳೆ ಜಕ್ರಿಬೆಟ್ಟು ಎಂಬಲ್ಲಿ ಗ್ರಾಮಾಂತರ ಎಸ್.ಐ.ಪ್ರಸನ್ನ ಅವರ ಜೊತೆಯಲ್ಲಿ ಪೈಯರಿಂಗ್ನ ನಡೆಸಿ ದನಕಳ್ಳರಿಗೆ ಬಿಸಿ ಮುಟ್ಟಿಸಿದ್ದರು.

ಸಾಮಾಜಿಕ ಕಳಕಳಿಯ ಕೆಲಸ ಕೂಡಾ ಇವರಲ್ಲಿ ಅನ್ನುವುದಕ್ಕೆ ಎರಡು ಸಾಕ್ಷಿಗಳಿವೆ.
ಚಿಮಣಿ ದೀಪದ ಅಡಿಯಲ್ಲಿ ಬದುಕು ಸಾಗಿಸುತ್ತಿದ್ದ ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪೋಡಿ ಎಂಬ ಬಡ ಒಂಟಿ ಮಹಿಳೆಯ ಮನೆಗೆ ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ್ ಅವರ ಮೂಲಕ ಉಚಿತ ಗ್ಯಾಸ್ ಅಳವಡಿಕೆ ಮತ್ತು ಮನೆಗೆ ಸೋಲಾರ್ ವಿದ್ಯುತ್ ಪೂರೈಕೆ ವ್ಯವಸ್ಥೆ ಮಾಡುವಲ್ಲಿ ಯಶಸ್ವಿಯಾಗಿದ್ದರು.ಜೊತೆಗೆ ಗೊಳ್ತಮಜಲು ಗ್ರಾಮದ ನೆಟ್ಲ ಪಿಲಿಂಜ ಎಂಬಲ್ಲಿನ ಒಂಟಿ ಬಡ ಮಹಿಳೆ ಧರ್ಣಮ್ಮ ಅವರಿಗೆ “ಕುಟುಂಬ ” ಸಂಘ ದ ವತಿಯಿಂದ ಮನೆ ನಿರ್ಮಾಣ ಮಾಡಿಕೊಟ್ಟಿರುವುದರ ಹಿಂದೆ ಇವರ ಶ್ರಮ ಬಹಳಷ್ಟು ಇತ್ತು ಎನ್ನುವುದು ಹೇಳಲೇಬೇಕಾಗಿದೆ.
ಬಂಟ್ವಾಳ ತಾಲೂಕಿನ ಕಲ್ಲಡ್ಕ ನಿವಾಸಿಗಳಾದ ನಿವಾಸಿಗಳಿಬ್ಬರ ಗಡಿಪಾರು ಆದೇಶ ಆಗಿದ್ದು ಇವರ ಅವಧಿಯಲ್ಲಿ , ಪುಡಿ ರೌಡಿಗಳಿಂದ ಹಿಡಿದು ಅಶಾಂತಿ ಮಾಡಿದ ಪ್ರತಿಯೊಬ್ಬರನ್ನು ಅರೆಸ್ಟ್ ಮಾಡಿದ್ದು, ಅವರಿಗೆ ಪೋಲೀಸ್ ಲಾಠಿ ರುಚಿ ತೋರಿಸಿದ ಎಸ್.ಐ.ಚಂದ್ರಶೇಖರ್ ಅವರು ಎನ್ನುವದು ಸತ್ಯ. ಹಾಗಾಗಿಯೇ ಬಂಟ್ವಾಳ ಸದ್ಯದ ಪರಿಸ್ಥಿತಿಯಲ್ಲಿ ಶಾಂತಿಯುತವಾಗಿತ್ತು ಅನ್ನುವುದನ್ನು ನಾವು ಒಪ್ಪಲೇಬೇಕು.
ಪೋಲೀಸ್ ಇಲಾಖೆಗೆ ಪೋಲಿಸರ ಕಲ್ಯಾಣ ಮಂಟಪ ನಿರ್ಮಾಣದ ಉದ್ದೇಶದಿಂದ ಪಾಣೆಮಂಗಳೂರು ಎಂಬಲ್ಲಿ
1 ಎಕರೆ ಜಮೀನು ಕಾದಿರಿಸುವ ವ್ಯವಸ್ಥೆಯನ್ನು ಇವರು ಮಾಡಿದ್ದರು.
ಅಪರಾಧ ಸಂಖ್ಯೆ ಯನ್ನು ಕಡಿಮೆ ಮಾಡುವ ಉದ್ದೇಶದಿಂದ ಆಯಕಟ್ಟಿನ ಸ್ಥಳಗಳಲ್ಲಿ ಸಿ.ಸಿ.ಕ್ಯಾಮರಾ ಅಳವಡಿಕೆ ಮಾಡಿದ್ದಾರೆ.ಅಂತಹ ಒಬ್ಬ ಪ್ರಾಮಾಣಿಕ ಪೋಲೀಸ್ ಅಧಿಕಾರಿಯನ್ನು ಭಾರವಾದ ಹೃದಯದಿಂದ ಬೀಳ್ಕೊಟ್ಟಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here