ಪುಂಜಾಲಕಟ್ಟೆ: ಇಲ್ಲಿನ ಬದ್ರಿಯಾ ಜುಮಾ ಮಸೀದಿ ಮತ್ತು ನುಸ್ರತುಲ್ ಇಸ್ಲಾಂ ಯಂಗ್ ಮೆನ್ಸ್ ಅಸೋಸಿಯೇಶನ್ ವತಿಯಿಂದ ಪುಂಜಾಲಕಟ್ಟೆಯಲ್ಲಿ ಲೋಕಪ್ರವಾದಿ ಮಹಮ್ಮದ್ ಮುಸ್ತಾಫ ಪೈಗಂಬರ್ (ಸ.ಅ.)ಅವರ ಜನ್ಮ ದಿನಾಚರಣೆ ಈದ್ ಮಿಲಾದ್ ಆಚರಿಸಲಾಯಿತು.


ಅ.ಪ್ರಯುಕ್ತ ಮುಸ್ಲಿಂ ಬಾಂಧವರು ಪುಂಜಾಲಕಟ್ಟೆ ಪೇಟೆಯಲ್ಲಿ ಮೆರವಣಿಗೆ ನಡೆಸಿದರು. ಮೆರವಣಿಗೆಯಲ್ಲಿ ರೌಲತುಲ್ ಉಲೂಂ ಮದರಸಾ ವಿದ್ಯಾರ್ಥಿಗಳು ದಫ್ ನೃತ್ಯ, ಮತ್ತು ಹಾಡುಗಳನ್ನು ಹಾಡಿದರು.
ಜುಮಾ ಮಸೀದಿ ಯ ಧರ್ಮಗುರು ಪಿ.ಎಚ್ ಅಶ್ರಫ್ ಪೈಝಿ ಅವರು ರ್ಯಾಲಿಯನ್ನು ಉದ್ಘಾಟಿಸಿದರು.
ಜುಮಾ ಮಸೀದಿ ಅಧ್ಯಕ್ಷ ಯೂಸುಫ್ ಹಾಜಿ ಮೂರ್ಜೆ ಯಂಗ್ ಮೆನ್ಸ್ ಅಧ್ಯಕ್ಷ ಶಾಜಿ ಹುಸೇನ್ , ಕಾರ್ಯದರ್ಶಿ ಉಸ್ಮಾನ್ ಬಿ.ಎಚ್, ಮಜೀದಿ ದಾರಿಮಿ , ಅಬ್ದುಲ್ ಖಾದರ್ ಮತ್ತಿತರರು ಪಾಲ್ಗೊಂಡಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here