ಪ್ರಧಾನ ಮಂತ್ರಿ ನರೆಂದ್ರ ಮೋದಿಯವರ ಪರಿಕಲ್ಪನೆಯಂತೆ ನಗರ ಸೌಂದರ್ಯ ಕಾರ್ಯಕ್ರಮದಡಿಯಲ್ಲಿ ಮಂಗಳೂರು ನಗರವನ್ನು ಸ್ಮಾರ್ಟ್ ಸಿಟಿಯಾಗಿಸುವಲ್ಲಿ ಆಯ್ಕೆ ಗೊಂಡು ಕೆಲ ಸಮಯಯಾದರೂ ಕಾರ್ಯರೂಪಕ್ಕೆ ಬಾರದಿರುವುದು ಹಿಂದಿನ ಪಾಲಿಕೆ ಆಡಳಿತದ ಕಾರ್ಯ ವೈಖರಿಯೆ ಕಾರಣವಾಗಿದ್ದು ,ಮಂಗಳೂರಿನ ನಗರ ಮತದಾರರು ಇನ್ನಾದರೂ ಎಚ್ಚೆತ್ತು ಕೊಳ್ಳಬೇಕಾ ಗಿದೆ.
ಈ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಮುಖಗಳನ್ನು ಹೊಂದಿರುವ ಯುವ ಬಿ.ಜೆ.ಪಿ.ಅಭ್ಯರ್ಥಿಗಳ ನ್ನು ಗೆಲ್ಲಿಸಿ ಸ್ಮಾರ್ಟ್ ಸಿಟಿ ಶೀಘ್ರವಾಗಿ ಕಾರ್ಯರೂಪಕ್ಕೆ ತರಲು ಮತದಾರರು ಸಹಕರಿಸ ಬೇಕು ಎಂದು ಬಂಟ್ವಾಳ ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು ಪತ್ರಿಕಾ ಹೇಳಿಕೆ ಮೂಲಕ ಪಾಲಿಕೆ ಮತದಾರರ ಲ್ಲಿ ವಿನಂತಿಸಿದ್ದಾರೆ.
ದೇಶದ ಪ್ರತಿಷ್ಠಿತ ನಗರಗಳಲ್ಲಿ ಮಂಗಳೂರು ನಗರವೂ ಮುಂಚೂಣಿ ಯಲ್ಲಿದ್ದು ಈ ನಗರದಲ್ಲಿ ಹತ್ತಿರ ಇರುವ ನಾವೆಲ್ಲರೂ ಭಾಗ್ಯಶಾಲಿಗಳು.
ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಮಂಗಳೂರು ಶಾಸಕರಾದ ವೇದವ್ಯಾಸ ಕಾಮತ್ ಮತ್ತು ಡಾ.ಭರತ್ ಶೆಟ್ಟಿ ಸಹಿತ ಜಿಲ್ಲೆಯಲ್ಲಿನ ಏಳು ಮಂದಿ ಹೊಸ ಮುಖ ಶಾಸಕರು ಹಾಗೂ ಮಂಗಳೂರು ಸಂಸದರಾದ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಸಹಿತ ವಿವಿದ ಸ್ತರದ ಜನಪ್ರತಿನಿದಿಗಳು ತಮ್ಮ ಇತಿ-ಮಿತಿಯಲ್ಲಿ ಕ್ಣೇತ್ರದ ಜನತೆಯ ಜೊತೆಯಲ್ಲಿ ಕೆಲಸ ಕಾರ್ಯ ಮಾಡುತ್ತಿರುವುದು ತಿಳಿದ ವಿಚಾರ.
ಇತ್ತೀಚಿನ ಬದಲಾವಣೆ ಗೊಂಡ ಮೀಸಲಾತಿ ಗೊಂದಲದಿಂದಾಗಿ ಕೆಲ ಬಿ.ಜೆ.ಪಿ.ಅಭ್ಯರ್ಥಿಗಳಿಗೆ ಚುನಾವಣೆ ಯಲ್ಲಿ ಸ್ಪರ್ದಿಸಲು ಅವಕಾಶ ಇಲ್ಲದಂತಾಗಿರುವುದು ಸಹ ಕೆಲ ಕ್ಷೇತ್ರದ ಮತದಾರರಿಗೆ ನೊವು ತಂದಿರುವುದು ತಿಳಿದುಬಂದಿದೆ. ಈ ಗೊಂದಲ ಹಿನ್ನೆಲೆಯಲ್ಲಿ ಹೆಚ್ಚಿನ ಮತದಾರರು ಕಡ್ದಾಯವಾಗಿ ಮತ ಚಲಾಯಿಸಬೆಕು.
ಬದಲಾವಣೆಯ ಆಡಳಿತದಿಂದ ಸ್ಥಳೀಯ ಸಂಸ್ಥೆಗಳು ಸದೃಡವಾಗಿ ಕೆಲಸ ನಿರ್ವಹಿಸಲು ಸಾದ್ಯ.
ಸ್ವಚ್ಚಂಧವಾದ ಭ್ರಷ್ಟಾಚಾರ ರಹಿತ,ಸರ್ವರಿಗೂ ಸಮಾನವಾದ ಆಡಳಿತ ವನ್ನು ಕೇಂದ್ರ, ರಾಜ್ಯ ಸರಕಾರಗಳು ನೀಡುತಿದ್ದು ಮಂಗಳೂರು ಮಹಾನಗರ ಪಾಲಿಕೆ ಯಲ್ಲಿ ಸಹ ಇಂತಹ ಆಡಳಿತದ ನಿರೀಕ್ಷೆಕಾಗಿ ಪಾಲಿಕೆಯಲ್ಲಿನ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಪ್ರಭಾಕರ ಪ್ರಭು ಪ್ರತಿಕಾ ಹೇಳಿಕೆಯಲ್ಲಿ ವಿನಂತಿಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here